Advertisement

Money Laundering Case: ಜಲ ಜೀವನ್ ಮಿಷನ್ ಹಗರಣ: ರಾಜಸ್ಥಾನದ 25 ಸ್ಥಳಗಳಲ್ಲಿ ಇಡಿ ದಾಳಿ

11:01 AM Nov 03, 2023 | Team Udayavani |

ರಾಜಸ್ಥಾನ: ಜಲ ಜೀವನ್ ಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಇಂದು ರಾಜಸ್ಥಾನದ ಚುನಾವಣಾ ಕಣದಲ್ಲಿರುವ ಉನ್ನತ ಐಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ.

Advertisement

ದಾಳಿ ನಡೆಸಿದ ಅಧಿಕಾರಿಗಳ ತಂಡ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ (ಪಿಎಚ್‌ಇ) ಇಲಾಖೆಯ ಐಎಎಸ್ ಅಧಿಕಾರಿ ಸುಬೋಧ್ ಅಗರ್ವಾಲ್ ಅವರ ಮನೆ ಸೇರಿದಂತೆ ರಾಜ್ಯದ ರಾಜಧಾನಿ ಜೈಪುರ ಮತ್ತು ದೌಸಾದ 25 ಕ್ಕೂ ಹೆಚ್ಚು ಸ್ಥಳಗಳ ಮೇಲೆ ತನಿಖಾ ಸಂಸ್ಥೆ ದಾಳಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹಗರಣಕ್ಕೆ ಸಂಬಂಧಿಸಿದ ಇತರ ಆರೋಗ್ಯ ಅಧಿಕಾರಿಗಳನ್ನು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಕೂಡ ಇದೆ ರೀತಿಯ ದಾಳಿಗಳು ನಡೆದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಫ್‌ಐಆರ್‌ನಲ್ಲಿ ಶ್ರೀ ಶ್ಯಾಮ್ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಪದ್ಮಚಂದ್ ಜೈನ್ ಮತ್ತು ಶ್ರೀ ಗಣಪತಿ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಮಹೇಶ್ ಮಿತ್ತಲ್ ಇತರರು ಅಕ್ರಮ ರಕ್ಷಣೆ, ಟೆಂಡರ್, ಬಿಲ್ ಅನುಮೋದನೆಗಳನ್ನು ಪಡೆಯಲು ಸಾರ್ವಜನಿಕ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತು ವಿವಿಧ PHED ಯೋಜನೆಗಳಲ್ಲಿ ಅವರ ಕೆಲಸದಲ್ಲಿನ ಅಕ್ರಮಗಳನ್ನು ಮುಚ್ಚಿಹಾಕಲು ಲಂಚ ನೀಡಿರುವುದಾಗಿ ತಿಳಿದುಬಂದಿದೆ.

Advertisement

ಶಂಕಿತರು ಹರಿಯಾಣದಿಂದ ಕದ್ದ ಮಾಲುಗಳನ್ನು ತಂದು ತಮ್ಮ ಟೆಂಡರ್‌ಗಳು/ಗುತ್ತಿಗೆಗಳಲ್ಲಿ ಬಳಸುತ್ತಿದ್ದರು ಮತ್ತು ಪಿಎಚ್‌ಇಡಿ ಒಪ್ಪಂದಗಳನ್ನು ಪಡೆಯಲು IRCON ನಿಂದ ಕೆಲಸ ಪೂರ್ಣಗೊಳಿಸಿದ ನಕಲಿ ಪತ್ರಗಳನ್ನು ಸಲ್ಲಿಸಿದ್ದಾರೆ, ಎಂದು ಆರೋಪಿಸಿದೆ.

ಜಲ ಜೀವನ್ ಮಿಷನ್ ಎಂಬುದು ಟ್ಯಾಪ್ ಸಂಪರ್ಕಗಳ ಮೂಲಕ ಮನೆಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ರಾಜಸ್ಥಾನ ರಾಜ್ಯ ಪಿಎಚ್‌ಇಡಿ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ದಾಳಿಗೆ ಸಂಬಂಧಿಸಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೇಂದ್ರ ಮತ್ತು ಇಡಿ ಎರಡಕ್ಕೂ ತಿರುಗೇಟು ನೀಡಿದ್ದು, ಪ್ರತಿಪಕ್ಷ ನಾಯಕರನ್ನು ಬೆದರಿಸಲು ಮತ್ತು ರಾಜ್ಯ ಸರ್ಕಾರಗಳನ್ನು ಉರುಳಿಸಲು ದೇಶಾದ್ಯಂತ ದಾಳಿಗಳನ್ನುನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Chaitra case: ಚೈತ್ರಾ ಮತ್ತು ತಂಡದ ವಿರುದ್ಧ ಶೀಘ್ರದಲ್ಲೇ ಆರೋಪಪಟ್ಟಿ ಸಲ್ಲಿಕೆ

Advertisement

Udayavani is now on Telegram. Click here to join our channel and stay updated with the latest news.

Next