Advertisement

ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ; 200 ಕೆ.ಜಿ. ಮಾಂಸ ವಶ

10:59 AM Jul 17, 2022 | Team Udayavani |

ಕುಣಿಗಲ್: ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 200 ಕ್ಕೂ ಅಧಿಕ ಕೆ.ಜಿ. ಗೋಮಾಂಸ ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಪಟ್ಟಣದ ಮದ್ದೂರು ರಸ್ತೆಯಲ್ಲಿ ನಡೆದಿದೆ.

Advertisement

ಕುಣಿಗಲ್ ಟೌನ್ ಮದ್ದೂರು ರಸ್ತೆ ನಿವಾಸಿ ಸೈಯದ್ ಗಫಾರ್ ಬಂಧಿತ ಆರೋಪಿ, ಮತ್ತೋರ್ವ ಸೈಯದ್ ಪಾಷ ತಲೆಮರೆಸಿಕೊಂಡಿದ್ದಾನೆ.

ಪಟ್ಟಣದ ಕೋಟೆ ನಿವಾಸಿ ಟೌ ಗ್ಯಾನ್ ಪೌಂಡೇಷನ್ ಎನ್.ಜಿ.ಓ. ಸ್ವಯಂ ಸೇವಕ ಕೆ.ಆರ್. ಮಂಜುನಾಥ್ ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸರು ಭಾನುವಾರ ಮುಂಜಾನೆ ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ದಾಳಿ ನಡೆಸಿ, ಒಬ್ಬನ್ನು ಬಂದಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next