Advertisement

ಖಾಸಗಿ ಆಸ್ಪತ್ರೆಗಳು ದರ ನೀತಿ ಪಾಲಿಸಲಿ

08:53 PM May 09, 2021 | Team Udayavani |

ರಾಯಚೂರು: ಕೊರೊನಾ ಚಿಕಿತ್ಸೆಗೆ ಸರ್ಕಾರ ದರ ನೀತಿ ಪ್ರಕಟಿಸಿದ್ದು, ಖಾಸಗಿ ಆಸ್ಪತ್ರೆಗಳು ಅದೇ ರೀತಿ ಚಿಕಿತ್ಸೆ ನೀಡಬೇಕು. ಹೆಚ್ಚುವರಿ ಹಣ ಪಡೆದು ಚಿಕಿತ್ಸೆ ನೀಡಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

Advertisement

ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಖಾಸಗಿ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ವೈದ್ಯಕೀಯ ತುರ್ತು ಏರ್ಪಟ್ಟಿದೆ. ಇಂಥ ಸನ್ನಿವೇಶದಲ್ಲಿ ಜನ ಸಾಮಾನ್ಯರ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್‌-19ಗೆ ಚಿಕಿತ್ಸೆ ನೀಡಲು ದರ ನಿಗದಿ ಪಡಿಸಿದೆ. ಕೆಲವು ಖಾಸಗಿ ಆಸ್ಪತ್ರೆಗಳು ಅದೇ ದರವನ್ನೇ ಪಡೆದರೆ; ಕೆಲ ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಎಲ್ಲ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಪಡಿಸಿದ ದರವನ್ನೆ ಪಡೆಯಬೇಕು. ಜನ ಜೀವ ಉಳಿಸುವ ವೈದ್ಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದಾರೆ. ಅದಕ್ಕೆ ಚ್ಯುತಿ ಬರಬಾರದು ಎಂದರು.

ಕೊರೊನಾ ನಿಯಂತ್ರಣಕ್ಕೆ ಇಂಜಿಕ್ಷನ್‌, ಆಕ್ಸಿಜನ್‌ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು. ರಾತ್ರಿ ಹನ್ನೆರಡಾದರೂ ಖಾಸಗಿ ಆಸ್ಪತ್ರೆಗಳ ಅಗತ್ಯತೆ ಈಡೇರಿಸಲು ಸರ್ಕಾರ ಸಿದ್ಧವಿದೆ. ಈ ವಿಷಮ ಸನ್ನಿವೇಶದಲ್ಲಿ ಯುದೊœàಪಾದಿಯಲ್ಲಿ ರೋಗಿಗಳನ್ನು ಉಪಚರಿಸಿ, ರೋಗದಿಂದ ಗುಣಪಡಿಸುವಂತೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಈ ವೇಳೆ ಜನರ ವಿಶ್ವಾಸ ಹಾಗೂ ಪ್ರೀತಿ ಗಳಿಸಬೇಕು. ವೈದ್ಯರು ಬಡವರಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರೆ ಜೀವನವಿಡೀ ನಿಮ್ಮನ್ನು ಸ್ಮರಿಸುತ್ತಾರೆ. ತುಮಕೂರು ಜಿಲ್ಲೆಯ ತಿಪಟೂರಿನ ವೈದ್ಯರು ರೋಗಿಗಳಿಗೆ ಉಪಚರಿಸುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಾಜ್ಯದ ಜನರು ಅಭಿನಂದನೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯ ವೈದ್ಯರು ಕೂಡ ಅದೇ ಸಾಲಿಗೆ ಸೇರಬೇಕು ಎಂದರು.

ಡಿಸಿ ಆರ್‌.ವೆಂಕಟೇಶ ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆಯಿಲ್ಲ. ಬೇಡಿಕೆ ಹೆಚ್ಚಾದರೂ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ರೆಮ್‌ಡೆಸಿವಿಯರ್‌ ಇಂಜಿಕ್ಷನ್‌ ಕೂಡ ನಿತ್ಯ ಪೂರೈಕೆಯಾಗುತ್ತಿದೆ. ಅಗತ್ಯವಿದ್ದರಿಗೆ ವೈದ್ಯರೇ ನಿರ್ಧರಿಸಿ ನೀಡಬೇಕು. ಸರ್ಕಾರ ಸಿಟಿ ಸ್ಕಾನ್‌ಗೆ 1500 ರೂ., ಎಕ್ಸ್‌ರೇಗೆ 150 ರೂ. ನಿಗದಿಪಡಿಸಿದೆ. ಅದೇ ದರ ಪಡೆಯಬೇಕು. ಆ ಮೂಲಕ ಜನರಿಗೆ ಸಹಕಾರ ನೀಡಿ, ಕೋವಿಡ್‌ ಮೊದಲ ಅಲೆ ವೇಳೆ ಕೇವಲ ನಾಲ್ಕು ಆಸ್ಪತ್ರೆಗಳ ಸಹಕಾರ ಪಡೆಯಲಾಗಿತ್ತು. ಇದೀಗ ಯಾರು ಬೇಡಿಕೆ ಸಲ್ಲಿಸಿದರೂ ಅನುಮತಿ ನೀಡಲಾಗುವುದು. ಎಲ್ಲ ರೀತಿಯ ನೆರವು ನೀಡಲು ಜಿಲ್ಲಾಡಳಿತ ಸಿದ್ಧ ಎಂದರು.

Advertisement

ಶಾಸಕ ಡಾ| ಶಿವರಾಜ ಪಾಟೀಲ್‌ ಮಾತನಾಡಿ, ಜಿಲ್ಲೆಗೆ 17 ಸಾವಿರ ರೆಮ್‌ಡೆಸಿವಿಯರ್‌ ಚುಚ್ಚುಮದ್ದು ಸರಬರಾಜು ಮಾಡಲಾಗಿದೆ. ನಿನ್ನೆ 200 ರೆಮ್‌ಡೆಸಿವಿಯರ್‌ ಚುಚುಮದ್ದು ಬಂದಿದೆ. ಇಂದು 150 ಬರಲಿದೆ. ಮುಂಬರುವ ದಿನಗಳಲ್ಲಿ ಕೊರತೆ ಆಗುವುದಿಲ್ಲ. ಅತ್ಯವಶ್ಯಕತೆ ಇದ್ದವರಿಗೆ ಮಾತ್ರ ರೆಮಿxಸಿವಿರ್‌ ಬಳಸಬೇಕು ಎಂದರು. ಮುಂದಿನ ಎರಡು ದಿನಕ್ಕೆ ಬೇಕಾಗುವ 24 ಟನ್‌ ಆಕ್ಸಿಜಿನ್‌ ನಮ್ಮಲ್ಲಿ ಲಭ್ಯವಿದೆ. ಆಕ್ಸಿಜಿನ್‌, ಬೆಡ್‌, ರೆಮ್‌ಡೆಸಿವಿಯರ್‌ ಕೊರತೆಯಿಲ್ಲ. ಜಿಲ್ಲೆಯಲ್ಲಿ 26 ಖಾಸಗಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆ ನೀಡುತ್ತಿವೆ. ರಾಯಚೂರು ನಗರದಲ್ಲಿಯೇ 17 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇಷ್ಟು ಸಂಖ್ಯೆಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮುಂದೆ ಬಂದಿವೆ ಎಂದರು.

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಐಎಂಎ ಅಧ್ಯಕ್ಷ ಡಾ| ರಾಮಪ್ಪ, ಡಾ| ನಾಗರಾಜ ಬಾಲ್ಕಿ ಸೇರಿದಂತೆ ಖಾಸಗಿ ಆಸ್ಪತ್ರೆಗಳ ವೈದ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next