ರಾಯಚೂರು: ಉದ್ದೇಶಿತ ವರ್ತುಲ ರಸ್ತೆ ನಿರ್ಮಾಣ ಹಾಗೂ ಹೆದ್ದಾರಿ ನಿರ್ಮಾಣಕ್ಕೆ ಬೇಕಾದ ಭೂ ಸ್ವಾಧೀನ ಮಾಡಿಕೊಳ್ಳಲು ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಭಾರತ ಮಾಲಾ ಪರಿ ಯೋಜನೆಯಡಿ ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಆಂಧ್ರ ಪ್ರದೇಶದ ಕರ್ನೂಲ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂ ಸ್ವಾಧಿಧೀನ ಮಾಡಿಕೊಳ್ಳಬೇಕಿದೆ. ರಸ್ತೆ ನಿರ್ಮಾಣ ಕುರಿತು ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳ ಯೋಜನಾ ಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಭೂ ಸ್ವಾ ಧೀನಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಬೇಕು. ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ, ಜೇವರ್ಗಿ, ಕಲಬುರಗಿ ಮಾರ್ಗವಾಗಿ 75 ಕಿ.ಮೀ. ಹಾಗೂ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 37 ಕಿಮೀ ಹೆದ್ದಾರಿ ಹಾದು ಹೋಗಲಿದೆ. ಕೃಷಿ ಭೂಮಿ ಸ್ವಾ ಧೀನಕ್ಕೆ ಬೆಲೆ ನಿಗದಿಪಡಿಸಬೇಕಿದೆ. ಯರಮರಸ್, ಚಿಕ್ಕಸುಗೂರು, ದೇವಸುಗೂರು ಮೂಲಕ ಮಂತ್ರಾಲಯ ರಸ್ತೆಗೆ ಜೋಡಿಸುವ ಲಿಂಕ್ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ನಡೆಸಿರುವ ಸಮೀಕ್ಷೆಯಂತೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ಮಂತ್ರಾಲಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ದಟ್ಟಣೆ ಸಮೀಕ್ಷೆ ನಡೆಸಬೇಕು. ಹೆದ್ದಾರಿ ಕಾಮಗಾರಿಗಳ ಕುರಿತು ಈಗಾಗಲೇ ಸಿದ್ಧಪಡಿಸಿದ ನೀಲನಕ್ಷೆಯಂತೆ ಹಾದು ಹೋಗುವ ಪ್ರತಿ ಗ್ರಾಮದ ಭೂಮಿ, ನಷ್ಟದ ಅಂದಾಜುಗಳ ಮಾಹಿತಿಯನ್ನು ನೀಡಿದಾಗ ಮಾತ್ರ ಭೂ ಸ್ವಾಧಿಧೀನ ಬೆಲೆ ನಿರ್ಧರಿಸಲು ಸಾಧ್ಯ. ಸಂಬಂ ಧಿಸಿದ ಅಧಿಕಾರಿಗಳು ವಾರದೊಳಗೆ ಕೆಲಸ ಮುಗಿಸಬೇಕು ಎಂದರು. ಎಡಿಸಿ ದುರುಗೇಶ, ಹೆದ್ದಾರಿ ಪ್ರಾಧಿಕಾರ ಅಧಿ ಕಾರಿಗಳು, ಆರ್‌ಡಿಎ ಪ್ರಭಾರ ಆಯುಕ್ತ ಶರಣಪ್ಪ, ಎಇಇ ಪ್ರಕಾಶ ಸೇರಿ ಇದ್ದರು.