Advertisement

ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ

06:33 PM May 08, 2020 | Naveen |

ರಾಯಚೂರು: ರಾಜ್ಯದಲ್ಲಿ ಸಂಪೂರ್ಣ ಮದ್ಯಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

Advertisement

ಮಹಿಳೆಯರು ಹಲವು ವರ್ಷದಿಂದ ಮದ್ಯ ನಿಷೇಧಕ್ಕೆ ಆಗ್ರಹಿಸಿ ಹೋರಾಡುತ್ತಿದ್ದಾರೆ. ಕೋವಿಡ್ ವೈರಸ್‌ ಹರಡುವುದನ್ನು ತಡೆಯಲು ಸರ್ಕಾರ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿತ್ತು. ಇದರಿಂದ ಬಡ ಕುಟುಂಬಗಳು ಉತ್ತಮ ಜೀವನ ನಡೆಸುತ್ತಿದ್ದವು. ಭಾರತದ ಸಂವಿಧಾನದ ಅನುಚ್ಛೇದ 47ರಲ್ಲಿ ರಾಜ್ಯಗಳಿಗೆ ನೀಡಿದ ನಿರ್ದೇಶನದಂತೆ ಮದ್ಯ ಮುಕ್ತ ಕರ್ನಾಟಕಕ್ಕಾಗಿ ಸರ್ಕಾರದ ನೀತಿ ಜಾರಿಗೊಳಿಸಬೇಕು. ಅಲ್ಲಿವರೆಗೆ ರಾಜ್ಯದಲ್ಲಿ ಮದ್ಯ ಮಾರಾಟ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಮದ್ಯ ವರ್ಜನ ಕೇಂದ್ರ ಆರಂಭಿಸಿ ಮದ್ಯ ವ್ಯಸನಿಗಳನ್ನು ಅಲ್ಲಿಗೆ ಸೇರಿಸಬೇಕು. ಅವರ ಆರೋಗ್ಯ ಕಾಪಾಡುವ ಮತ್ತು ಕುಟುಂಬದ ಹೊಣೆಯನ್ನು ಸರ್ಕಾರವೇ ನಿಭಾಯಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆ ಮುಖಂಡರಾದ ವಿದ್ಯಾ ಪಾಟೀಲ, ಪಲ್ಲವಿ, ಗೌರಮ್ಮ, ಅನಸೂಯಾ, ಅಲಿಯಾ ಸುಲ್ತಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next