Advertisement
ಚಂದ್ರಮೌಳೇಶ್ವರ, ತೀನ್ ಕಂದಿಲ್, ಸ್ಟೇಶನ್ ರಸ್ತೆ, ಮಹಾವೀರ ಸರ್ಕಲ್ ಸೇರಿ ವಿವಿಧ ಸ್ಥಳಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಈ ಮುಂಚೆ ಕೃಷಿ ಮತ್ತು ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬಳಿಕ ಕೊರೊನಾ ವೈರಸ್ ಪ್ರಕರಣಗಳಿಲ್ಲದ ಕಾರಣಕ್ಕೆ ಹಸಿರು ವಲಯವನ್ನಾಗಿ ಗುರುತಿಸಿದ್ದರಿಂದ ಕೆಲವೊಂದು ಷರತ್ತುಗಳನ್ವಯ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವಹಿವಾಟು ನಡೆಸಬೇಕು ಎಂಬ ಕಟ್ಟೆಚ್ಚರ ನೀಡಲಾಗಿದೆ.
ಲಾಕ್‌ಡೌನ್ ವಿನಾಯಿತಿ ನೀಡಿದ ಮಾತ್ರಕ್ಕೆ ಮೈ ಮರೆಯದ ಜಿಲ್ಲಾಡಳಿತ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜನ ಮತ್ತು ವರ್ತಕರ ಹಿತದೃಷ್ಟಿಯಿಂದ ಕಲರ್ ಕೋಡ್ ಪದ್ಧತಿ ಜಾರಿಗೊಳಿಸಿದೆ. ನಗರದಲ್ಲಿರುವ ಅಂಗಡಿ ಮಳಿಗೆಗಳಿಗೆ ಹಸಿರು, ಹಳದಿ, ಕೆಂಪು ಬಣ್ಣಗಳ ಗುರುತು ಹಾಕಲಾಗುತ್ತಿದೆ. ಯಾವ ಬಣ್ಣದ ಗುರುತು ಉಳ್ಳವರು ಯಾವ ದಿನ ವಹಿವಾಟು ನಡೆಸಬೇಕು ಎಂದು ನಿರ್ದೇಶನ ನೀಡಿದೆ. ಆ ಮೂಲಕ ಜನದಟ್ಟಣೆ ಕಡಿಮೆ ಮಾಡುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ತಂತ್ರ ಅನುಸರಿಸಿದೆ. ಹಸಿರು ಬಣ್ಣ ಬಳಿದಿರುವ ಅಂಗಡಿಗಳು ಸೋಮವಾರ ಮತ್ತು ಗುರುವಾರ ತೆರೆಯಬೇಕು. ಹಳದಿ ಬಣ್ಣ ಬಳೆದಿರುವ ಅಂಗಡಿಗಳು ಮಂಗಳವಾರ ಮತ್ತು ಶುಕ್ರವಾರ, ಕೆಂಪು ಬಣ್ಣ ಬಳೆದಿರುವ ಅಂಗಡಿಗಳು ಬುಧವಾರ, ಶನಿವಾರ ತೆರೆಯಬೇಕು ವಹಿವಾಟು ನಡೆಸಬೇಕು ಎಂದು ತಿಳಿಸಲಾಗಿದೆ.
Related Articles
ಡಾ| ದೇವಾನಂದ ದೊಡ್ಡಮನಿ,
ನಗರಸಭೆ ಪೌರಾಯುಕ್ತ
Advertisement