Advertisement

ವಿಘ್ನೇಶ್ವರನಿಗೆ ವಿಜೃಂಭಣೆಯ ವಿದಾಯ

12:00 PM Sep 08, 2019 | Naveen |

ರಾಯಚೂರು: ಗಣೇಶ ಚತುರ್ಥಿ ನಿಮಿತ್ತ ಜಿಲ್ಲೆಯಲ್ಲಿ ವಿವಿಧೆಡೆ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಐದನೇ ದಿನವಾದ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ವಿಸರ್ಜಿಸಲಾಯಿತು. ಸೂಕ್ತ ಪೊಲೀಸ್‌ ಭದ್ರತೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸಡಗರ ಸಂಭ್ರಮದಿಂದ ಗಣೇಶನಿಗೆ ವಿದಾಯ ಹೇಳಲಾಯಿತು.

Advertisement

ಐದನೇ ದಿನ 790ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ನಗರದ ಬಹುತೇಕ ಗಣೇಶ ಮೂರ್ತಿಗಳನ್ನು ಖಾಸಬಾವಿಯಲ್ಲಿ ವಿಸರ್ಜಿಸಲ್ಪಟ್ಟರೆ, ಗ್ರಾಮೀಣ ಭಾಗದ ಗಣೇಶ ಮೂರ್ತಿಗಳನ್ನು ಕೃಷ್ಣ, ತುಂಗಭದ್ರಾ ನದಿ ಹಾಗೂ ಕೆರೆ ಕಟ್ಟೆಗಳಲ್ಲಿ, ಬಾವಿಗಳಲ್ಲಿ ವಿಸರ್ಜಿಸಲಾಯಿತು. ಶುಕ್ರವಾರ ಸಂಜೆಯಿಂದಲೇ ಅಲಂಕರಿಸಿದ ತೆರೆದ ವಾಹನಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿಕೊಂಡ ಗಣೇಶ ಸಮಿತಿಗಳು; ಡೊಳ್ಳು, ಡ್ರಮ್ಸ್‌, ನಾಸಿಕ್‌ ಡೋಲ್ ಸೇರಿ ವಿವಿಧ ವಾದ್ಯ ಮೇಳಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿದವು. ಶುಕ್ರವಾರ ರಾತ್ರಿ ಶುರುವಾದ ಮೆರವಣಿಗೆ ಶನಿವಾರ ಮಧ್ಯಾಹ್ನದವರೆಗೂ ನಡೆದಿದ್ದು ವಿಶೇಷವಾಗಿತ್ತು.

3ನೇ ದಿನ 200ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿತ್ತು. ಐದನೇ ದಿನ ರಾಯಚೂರು ಉಪವಿಭಾಗದಲ್ಲಿ 5 ಅತೀ ಸೂಕ್ಷ್ಮ , 84 ಸೂಕ್ಷ್ಮ ಮತ್ತು 207 ಸಾಧಾರಣ ಸೇರಿ ಒಟ್ಟು 296 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಲಿಂಗಸುಗೂರು ಉಪವಿಭಾಗದಲ್ಲಿ ಲಿಂಗಸುಗೂರು, ದೇವದುರ್ಗ ತಾಲೂಕುಗಳಲ್ಲಿ 6 ಅತೀ ಸೂಕ್ಷ್ಮ , 20 ಸೂಕ್ಷ್ಮ ಮತ್ತು 67 ಸಾಧಾರಣ ಸೇರಿ ಒಟ್ಟು 93 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಇನ್ನು ಸಿಂಧನೂರು ಉಪವಿಭಾಗದಲ್ಲಿ ಸಿಂಧನೂರು, ಮಸ್ಕಿ ತಾಲೂಕುಗಳಲ್ಲಿ 40 ಅತೀ ಸೂಕ್ಷ್ಮ , 115 ಸೂಕ್ಷ್ಮ ಮತ್ತು 246 ಸಾಧಾರಣ ಸೇರಿ ಒಟ್ಟು 401 ವಿನಾಯಕ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಕ್ರೇನ್‌ ವ್ಯವಸ್ಥೆ: ಗಣೇಶ ಮೂರ್ತಿಗಳ ವಿಸರ್ಜನೆಗೆ ಕ್ರೇನ್‌ ವ್ಯವಸ್ಥೆ ಮಾಡಲಾಗಿತ್ತು. ಖಾಸಬಾವಿ ಬಳಿ ಒಂದರ ಬಳಿ ಒಂದರಂತೆ ಗಣೇಶ ಮೂರ್ತಿಗಳನ್ನು ಕ್ರೇನ್‌ ಸಹಾಯದಿಂದ ವಿಸರ್ಜಿಸಲಾಯಿತು. ಬಾವಿಗೆ ಇಳಿಯಲು ಯಾರಿಗೂ ಅವಕಾಶ ನೀಡಲಿಲ್ಲ. ಇನ್ನೂ 7, 9 11ನೇ ದಿನ ಕೂಡ ಗಣೇಶಗಳ ವಿಸರ್ಜನೆ ಬಾಕಿ ಇದೆ.

ಬಿಗಿ ಬಂದೋಬಸ್ತ್: ಇನ್ನು ಎಲ್ಲೆಡೆ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್ ಜತೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಯಾವುದೇ ಅಹಿತಕರ ಘಟನೆಗೆ ಆಸ್ಪದೆ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪೊಲೀಸ್‌ ವಾಹನಗಳು ನಿರಂತರವಾಗಿ ಪೆಟ್ರೋಲಿಂಗ್‌ ಮಾಡಿದವು. ಪ್ರತಿಯೊಂದು ಗಣೇಶ ಮೂರ್ತಿಗಳ ಮುಂದೆ ಪೊಲೀಸ್‌ ಪೇದೆ, ಗೃಹರಕ್ಷಕ ದಳ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಸೂಕ್ಷ ್ಮ ಪ್ರದೇಶದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿತ್ತು. ಇದರ ಜೊತೆಗೆ ಪೊಲೀಸ್‌ ಅಧಿಕಾರಿಗಳು ವಾಹನಗಳಲ್ಲಿ ಇಡೀ ರಾತ್ರಿ ಗಸ್ತು ತಿರುಗುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next