Advertisement

ಕೋವಿಡ್ ನಿಯಂತ್ರಣದ ಬಳಿಕ ಪರೀಕ್ಷೆ ನಡೆಸಿ

05:08 PM Jul 01, 2020 | Team Udayavani |

ರಾಯಚೂರು: ಇನ್ನೂ ಎಲ್ಲೆಡೆ ಕೋವಿಡ್ ವೈರಸ್‌ ಭೀತಿ ಇದ್ದು, ಪರಿಸ್ಥಿತಿ ಹತೋಟಿಗೆ ಬಂದ ಬಳಿಕವೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸುವಂತೆ ಆಲ್‌ ಇಂಡಿಯಾ ಡೆಮಾಕ್ರೆಟಿವ್‌ ಸ್ಟೂಡೆಂಟ್ಸ್‌ ಆರ್ಗನೈಸೆಷನ್‌ (ಎಐಡಿಎಸ್‌ಒ) ಸದಸ್ಯರು ಒತ್ತಾಯಿಸಿದರು.

Advertisement

ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಮೂಲಕ ಗುಲ್ಬರ್ಗ ಹಾಗೂ ಅಕ್ಕಮಹಾದೇವಿ ವಿವಿಗಳ ಕುಲಪತಿಗಳಿಗೆ ಮನವಿ ಸಲ್ಲಿಸಿ, ಈಗ ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಪ್ರಯತ್ನ ನಡೆಯುತ್ತಿವೆ. ಅದಾದ ಬಳಿಕವೇ ನೇರವಾಗಿ ತರಗತಿಗಳನ್ನು ತೆಗೆದುಕೊಂಡು, ನಂತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.

ಗುಲ್ಬರ್ಗ ಹಾಗೂ ಅಕ್ಕಮಹಾದೇವಿ ವಿಶ್ವವಿದ್ಯಾಲಯಗಳು ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪಡೆದ ಪರೀಕ್ಷಾ ಶುಲ್ಕ ಹಿಂತಿರುಗಿಸಬೇಕು. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಪರೀಕ್ಷಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಆನ್‌ಲೈನ್‌ ತರಗತಿ ಆಧರಿಸಿ ಪರೀಕ್ಷೆ ನಡೆಸಬಾರದು. ಶಿಕ್ಷಣ ತಜ್ಞರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಸಮಾಲೋಚಿಸಿ ಪರೀಕ್ಷೆಯ ರೂಪುರೇಷೆ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, ಸದಸ್ಯರಾದ ಪೀರ್‌ಸಾಬ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next