Advertisement

ನಿನ್ನೆ ಮತ್ತೆರಡು ಮಂದಿಗೆ ಸೋಂಕು

12:22 PM Jun 06, 2020 | Naveen |

ರಾಯಚೂರು: ಜಿಲ್ಲೆಯಲ್ಲಿ ಗುರುವಾರ 88 ಪಾಸಿಟಿವ್‌ ಪ್ರಕರಣ ದೃಢಪಟ್ಟಿದ್ದರೆ ಶುಕ್ರವಾರ ಕೇವಲ 2 ಮಾತ್ರ ಬಂದಿರುವುದು ಸಮಾಧಾನ ತಂದಿದೆ. ಆ ಮೂಲಕ ಜಿಲ್ಲೆಯಲ್ಲಿ ಈವರೆಗೆ 358 ಪ್ರಕರಣ ದೃಢಪಟ್ಟಂತಾಗಿದೆ. ದೇವದುರ್ಗ ತಾಲೂಕು ಪಲಕನಮರಡಿ ಗ್ರಾಮದ 35 ವರ್ಷ ವ್ಯಕ್ತಿ (ಆರ್‌ಸಿಆರ್‌-357), ದೇವದುರ್ಗ ತಾಲೂಕು ಕರಡಿಗುಡ್ಡ ಗ್ರಾಮದ 24 ವರ್ಷ ಮಹಿಳೆಗೆ (ಆರ್‌ಸಿಆರ್‌- 358) ಸೋಂಕು ತಗುಲಿದ್ದು, ಇವರಿಬ್ಬರು ಮಹಾರಾಷ್ಟ್ರದಿಂದ ಬಂದಿದ್ದಾರೆ. 37 ಜನ ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, 321 ಪ್ರಕರಣ ಸಕ್ರಿಯವಾಗಿವೆ.

Advertisement

ಇನ್ನೂ ಶುಕ್ರವಾರ ಲಿಂಗಸುಗೂರು ತಾಲೂಕಿನಿಂದ 58, ಮಾನ್ವಿ ತಾಲೂಕಿನಿಂದ 62, ಸಿಂಧನೂರು ತಾಲೂಕಿನಿಂದ 9 ಮತ್ತು ರಾಯಚೂರು ತಾಲೂಕಿನಿಂದ 22, ಎರಡು ಸಾರಿ ಸೇರಿ 151 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್‌ -19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಮೊದಲು ಕಳುಹಿಸಿದ ವರದಿಗಳಲ್ಲಿ 140 ನೆಗೆಟಿವ್‌ ಬಂದಿವೆ. ಈವರೆಗೆ 17,040 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಿದ್ದು, ಅದರಲ್ಲಿ 15645 ವರದಿಗಳು ನೆಗೆಟಿವ್‌ ಆಗಿವೆ. ಉಳಿದಂತೆ 885 ಮಾದರಿಗಳ ಫಲಿತಾಂಶ ಬರಬೇಕಿದೆ. μವರ್‌ ಕ್ಲಿನಿಕ್‌ ಗಳಲ್ಲಿ ಶುಕ್ರವಾರ 538 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ.

ಸಾಂಸ್ಥಿಕ ಕ್ವಾರಂಟೈನ್‌ಗಳಿಂದ 261 ಜನರನ್ನು ಬಿಡುಗಡೆ ಮಾಡಲಾಗಿದೆ. 14 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಎಂಟು ಜನರನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ಅದರಲ್ಲಿ 15 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next