Advertisement

ಗಣೇಶ ವಿಸರ್ಜನೆ ವೇಳೆ ಗಲಾಟೆ: 6 ಜನ ಸೆರೆ

07:46 PM Aug 28, 2020 | Suhan S |

ರಾಯಚೂರು: ಸರ್ಕಾರದ ನಿಯಮಗಳಿಗೆ ಬದ್ಧವಾಗಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟರೂ ಗಣೇಶ ವಿಸರ್ಜನೆ ವೇಳೆ ಧ್ವನಿವರ್ಧಕ ಬಳಸಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ನಗರದ ಭಂಗಿಕುಂಟಾ ಬಳಿ ಯುವಕರು ಬುಧವಾರ ತಡರಾತ್ರಿ ದೊಡ್ಡ ಗಲಾಟೆ ನಡೆಸಿದ್ದಾರೆ. ಯು

Advertisement

ವಕರು ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಲ್ಲದೆ, ನೂಕಾಟ ಮಾಡಿದ್ದಾರೆ. ಆರು ವಾಹನಗಳನ್ನು ಜಖಂಗೊಳಿಸಿದ್ದು, ತಳ್ಳುಬಂಡಿಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಸದರ್‌ ಬಜಾರ್‌ ಠಾಣೆಯಲ್ಲಿ 36 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರು ಜನರನ್ನು ಬಂಧಿ ಸಿದ್ದಾರೆ. ಸುನೀಲ, ವೆಂಕಟ, ವಿನಯ, ತಿರುಮಲ, ವೆಂಕಟೇಶ ಹಾಗೂ ಅಭಿಷೇಕ ಬಂಧಿತರು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ಟಂಟಂ, ಐದು ಬೈಕ್‌ಗಳು ಜಖಂಗೊಂಡಿವೆ. ಮುನ್ನೂರುಕಾಪು ಕಲ್ಯಾಣ ಮಂಟಪ ಹತ್ತಿರದ ಶ್ರೀ ಮಾತಾ ಲಕ್ಷ¾ಮ್ಮದೇವಿ ನವ ಯುವಕ ಮಂಡಳಿಯು ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ವೇಳೆ ಘಟನೆ ನಡೆದಿದೆ. ಈ ಬಾರಿ ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಮಾಡಲು ಅವಕಾಶನೀಡುವುದಿಲ್ಲ. ಗುಂಪುಗೂಡುವಿಕೆ ನಿಷೇಧಿ ಸಲಾಗಿದೆ ಎಂದು ಜಿಲ್ಲಾಡಳಿತ ಮುಂಚೆಯೇ ತಿಳಿಸಿತ್ತು. ನಿಯಮ ಪಾಲಿಸುವುದಾಗಿ ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟ ಗಜಾನನ ಸಮಿತಿಗಳಿಗೆ ಮಾತ್ರ ಪರವಾನಗಿ ನೀಡಲಾಗಿತ್ತು. ಆದರೂ ವಿಸರ್ಜನೆಗೆ ಕೊನೆ ದಿನವಾಗಿದ್ದ ನಿನ್ನೆ ಈ ರೀತಿ ಗಲಾಟೆ ಜರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next