ಸಿಂಧನೂರು: ಕ್ರೀಡಾಕೂಟದಲ್ಲಿ ಸ್ನೇಹ ಮನೋಭಾವನೆಯೊಂದಿಗೆ ಸ್ಪರ್ಧೆ ನಡೆಯಬೇಕು. ಸೋಲು-ಗೆಲುವು ಸ್ಪರ್ಧಾತ್ಮಕ ರೀತಿಯಲ್ಲಿ ಸ್ವೀಕರಿಸಬೇಕು.
ಯುವಕರು ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ 371ಜೆ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಗಮನರಿಸಬೇಕು ಎಂದು ಜಿಪಂ ಸದಸ್ಯ ಎನ್.ಶಿವನಗೌಡ ಗೋರೆಬಾಳ ಹೇಳಿದರು.
ಅವರು ತಾಲೂಕಿನ ಬೆಳಗುರ್ಕಿ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ 13 ದಿನಗಳ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳ ಜತೆಗೆ ಯುವ ಸಮೂಹ ಭವಿಷ್ಯ ರೂಪಿಸಿಕೊಳ್ಳುವತ್ತಲೂ ಗಮನ ಹರಿಸಬೇಕು. 371ಜೆ ಮೀಸಲು ಸಿಕ್ಕಿರುವುದರಿಂದ ಎಲ್ಲ ಕ್ಷೇತ್ರಗಳನ್ನು ಸ್ಥಾನಮಾನ ಗಳಿಸಲು ಬೇಕಾದಷ್ಟು ಅವಕಾಶಗಳಿವೆ. ಹಿಂದುಳಿದ ಪ್ರದೇಶವನ್ನು ಅಭಿವೃದ್ಧಿಯತ್ತ ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದಲೇ ಸರಕಾರ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಈಗ ಯಾರೊಬ್ಬರೂ ಕಣ್ಮುಚ್ಚಿ ಕುಳಿತುಕೊಳ್ಳಬಾರದು. ಮುಂದುವರಿದ ಪ್ರದೇಶದ ಜೊತೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ ಸೌಲಭ್ಯವನ್ನು
ಬಳಸಿಕೊಳ್ಳಬೇಕಿದೆ ಎಂದರು.
ನಗರಯೋಜನಾ ಪ್ರಾ ಧಿಕಾರ ಮಾಜಿ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ ಮಾತನಾಡಿ, ಬಡತನ ಕೇಂದ್ರಿತ ಪ್ರದೇಶವಾಗಿದ್ದರೂ
ವಿವಿಧ ಕ್ಷೇತ್ರಗಳಲ್ಲಿ ಮಿಂಚುವ ಪ್ರತಿಭೆಗಳಿಗೆ ಕೊರತೆಯಿಲ್ಲ. ಗ್ರಾಮೀಣ ಭಾಗದ ಯುವಕರು ಕ್ರೀಡಾಕೂಟವನ್ನು ಶಾಂತಿಯಿಂದ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಗುರುದೇವ ಶಾಸ್ತ್ರೀಗಳು ಹಸ್ಮಕಲ್ ಸಾನ್ನಿಧ್ಯ ವಹಿಸಿದ್ದರು.
ಸನ್ಮಾನ: ಇದೇ ವೇಳೆ ಸೇನೆಯಲ್ಲಿ ಕೆಲಸ ಮಾಡುವ ಯೋಧ ಶ್ರೀನಿವಾಸ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಹೆಡ್ ಕಾನ್‌ಸ್ಟೆàಲಬ್ ಮೌನೇಶ್, ಪತ್ರಕರ್ತರಾದ ಯಮನಪ್ಪ ಪವಾರ ಗೋಮರ್ಸಿ ಅವರನ್ನು ಗೆಳೆಯರ ಬಳಗದಿಂದ ಗೌರವಿಸಲಾಯಿತು. ಯೋಧ ವೆಂಕಟೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ದು ಹೂಗಾರ್, ನಗರಸಭೆ ಸದಸ್ಯ ಹುಲುಗಯ್ಯ, ಭೀಮಣ್ಣ ನಾಯಕ, ಶರಣಪ್ಪ ಕನ್ನಾರಿ, ಪಂಪಾಪತಿ,
ಹೊನ್ನೂರಪ್ಪ, ರವಿನಾಯಕ, ಲಕ್ಷ್ಮಿ ಪತಿ, ಭೀಮಣ್ಣ ಬೆಳಗುರ್ಕಿ ಇದ್ದರು.
ಓದಿ :
ಪತ್ರಿಕೋದ್ಯಮ ಮಾರಾಟದ ಸರಕಾಗಿದ್ದು ವಿಷಾದನೀಯ