Advertisement

ಮಸ್ಕಿಯಲ್ಲಿಂದು ಕನ್ನಡ ಸಾಹಿತ್ಯ ಸಮ್ಮೇಳನ

04:07 PM Feb 14, 2021 | Team Udayavani |

ಮಸ್ಕಿ: ಮಸ್ಕಿ ಪಟ್ಟಣದಲ್ಲಿ ಇಂದು ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

Advertisement

ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಬೀದಿಗಳನ್ನು ಸಿಂಗರಿಸಲಾಗಿದೆ. ಪುರಸಭೆ ವ್ಯಾಪ್ತಿಯ ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ವತ್ಛತಾ ಕಾರ್ಯ ಪೂರೈಸಿದ್ದಾರೆ. ಸಮ್ಮೇಳನ ನಡೆಯುವ ಶ್ರೀಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲೂ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಅಕ್ಷರ ಜಾತ್ರೆಯ ಸಿದ್ಧತೆಗಳನ್ನು ಸಾಹಿತ್ಯಾಸಕ್ತರನ್ನು ಕೈ ಬಿಸಿ ಕರೆಯುತ್ತಿವೆ. ಇನ್ನು ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆ, ಗೋಷ್ಠಿಗಳಿಗೆಬೇಕಾದ ಸಿದ್ಧತೆ ಹಾಗೂ ಊಟಕ್ಕಾಗಿ ಪ್ರತ್ಯೇಕ ಹಾಲ್‌ನ ವ್ಯವಸ್ಥೆ ಮಾಡಲಾಗಿದೆ.

ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಚಾರ ರಥಕ್ಕೆ ಶನಿವಾರ ಗಚ್ಚಿನ ಮಠದ ವರರುದ್ರಮುನಿ ಸ್ವಾಮಿಗಳು ಚಾಲನೆ ನೀಡಿದ್ದು, ತಾಲೂಕಿನಾದ್ಯಂತ ನುಡಿ ಜಾತ್ರೆಯ ರಥ ಸಂಚರಿಸಿ ಜನರನ್ನು ಆಕರ್ಷಿಸಿದೆ. 2500 ಜನರ ನಿರೀಕ್ಷೆ: ಮಸ್ಕಿಯಲ್ಲಿ ಮೊದಲ ಸಾಹಿತ್ಯ ಸಮ್ಮೇಳನವಾಗಿದ್ದರಿಂದ ಎಲ್ಲರಲ್ಲೂ ಉತ್ಸಾಹ ಮತ್ತು ಹಲವು ನಿರೀಕ್ಷೆಗಳು ಮೂಡಿವೆ. ಸಮ್ಮೇಳನದಲ್ಲಿ ನಡೆಯುವ ಚರ್ಚೆ,ಗೋಷ್ಠಿ, ಬಹಿರಂಗ ಅವೇಶನವನ್ನು ವೀಕ್ಷಣೆ ಮಾಡುವುದು, ಸಾಂಸ್ಕೃತಿಕ, ಜನಪದ ಸಿರಿಯನ್ನು ಕಣ್ತುಂಬಿಕೊಳ್ಳಲು ಸಾಹಿತ್ಯಾಸಕ್ತರು ಹೆಚ್ಚು ಉತ್ಸಾಹ ಭರಿತರಾಗಿದ್ಧಾರೆ. ಸಾಹಿತ್ಯ ಸಮ್ಮೇಳನಕ್ಕೆ ಅಂದಾಜು 2500ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಸಮ್ಮೇಳನಕ್ಕೆ ಬರುವ ಎಲ್ಲ ಕನ್ನಡ ಮನಸುಗಳಹಸಿವು ತಣಿಸುವುದಕ್ಕೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

ಓದಿ : ಕ್ರೀಡೆಯಿಂದ ವೃತ್ತಿಯಲ್ಲಿ ನವೋಲ್ಲಾಸ: ದುರುಗೇಶ್‌

Advertisement

Udayavani is now on Telegram. Click here to join our channel and stay updated with the latest news.

Next