Advertisement

ಸಹಕಾರಿ ತತ್ವದಲ್ಲಿ ಸಹಕಾರವೇ ಮೊದಲು: ನಾಡಗೌಡ

06:56 PM Feb 01, 2021 | Team Udayavani |

ಸಿಂಧನೂರು: ರೈತರ ಕಲ್ಯಾಣವೇ ನಮ್ಮ ಮುಖ್ಯ ಧ್ಯೇಯ. ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟವೂ ಆ ನಿಟ್ಟಿನಲ್ಲಿ
ಮುನ್ನಡೆಯುತ್ತಿದ್ದು, ಸಹಕಾರವೇ ಮೊದಲು ಎಂಬ ಸಿದ್ಧಾಂತವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು
ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ನಗರದಲ್ಲಿ ಕೆಎಂಎಫ್‌ನ ಉಪವಿಭಾಗೀಯ ಕಚೇರಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸ ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ನನಗೆ ಗೊತ್ತಿರುವ ಪ್ರಕಾರ, ಇಲ್ಲಿ ಮೋಸಕ್ಕೆ ಅವಕಾಶವಿಲ್ಲ. ಇರುವ ಸೌಲಭ್ಯಗಳನ್ನು
ಸದ್ಬಳಕೆ ಮಾಡಿಕೊಂಡು ಮುನ್ನಡೆಯುವವರಿಗೆ ಭವಿಷ್ಯವಿದೆ ಎಂದರು.

ನಯಾಪೈಸೆಯೂ ಬೇಡ: ಕೆಎಂಎಫ್‌ ಅಧ್ಯಕ್ಷ, ಹಗರಿಬೊಮ್ಮನಹಳ್ಳಿ ಶಾಸಕ ಎಸ್‌.ಭೀಮಾನಾಯ್ಕ ಕಚೇರಿ ಉದ್ಘಾಟಿಸಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ 2 ಲಕ್ಷ 35 ಸಾವಿರ ಲೀ. ಸಂಗ್ರಹಣಾ ಸಾಮರ್ಥ್ಯದ ಒಕ್ಕೂಟಕ್ಕೆ ಹಾಲು ಸಂಗ್ರಹಣೆಯಲ್ಲಿ
ನಷ್ಟವಾದರೂ ರೈತರಿಗೆ ನಷ್ಟ ಮಾಡಿಲ್ಲ. ರಾಜ್ಯ 16 ಒಕ್ಕೂಟಗಳ ಪೈಕಿ ರಾಯಚೂರು, ಕೊಪ್ಪಳ, ಬಳ್ಳಾರಿ ಒಕ್ಕೂಟ ಮಾತ್ರ ರೈತರಿಗೆ ಲಾಭ ಕೊಟ್ಟಿದೆ. ಜೂನ್‌, ಜುಲೈನಲ್ಲಿ 40 ಲಕ್ಷ ರೂ.ನಷ್ಟವಾದರೂ ಅದರ ಹೊರೆ ರೈತರ ಮೇಲೆ ಹೇರಿಲ್ಲ. ಆದರೂ, ನಾವು ಸಿಂಧನೂರಿನಲ್ಲಿ 70 ಕೋಟಿ ರೂ. ವೆಚ್ಚದ ಪಶು ಆಹಾರ ಘಟಕ, 20 ಕೋಟಿ ರೂ. ವೆಚ್ಚದ ಮೆಗಾ ಡೈರಿ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಬಳ್ಳಾರಿಯಲ್ಲಿ 120 ಕೋಟಿ ರೂ. ವೆಚ್ಚದ ಮೆಗಾ ಡೈರಿ ಸ್ಥಾಪನೆಗೆ ಮುಂದಾದರೂ ಅಲ್ಲಿನ ಜಿಲ್ಲಾಧಿಕಾರಿ ಸೂಕ್ತ ಜಾಗ ತೋರಿಸದ್ದರಿಂದ 6 ತಿಂಗಳಿಂದ
ವಿಳಂಬವಾಗಿದೆ ಎಂದರು.

ಕೆಎಂಎಫ್‌ ಅಧ್ಯಕ್ಷನಾದ ಬಳಿಕ ನನಗೆ ಸಿಕ್ಕ 30 ಲಕ್ಷ ರೂ. ವೆಚ್ಚದ ವಾಹನ ತಿರಸ್ಕರಿಸಿದ್ದೇನೆ. ಹಾಗೆ ಟಿಎ, ಡಿಎ ಅಂತಾ ಕೊಟ್ಟ 1 ಲಕ್ಷ 17 ಸಾವಿ ರೂ.ಗಳನ್ನು ಕೆಎಂಎಫ್‌ಗೆ ವಾಪಸ್‌ ಕೊಟ್ಟಿರುವೆ. ಅಷ್ಟೇ ಅಲ್ಲ; ತಿಂಗಳಿಗೆ 3 ಸಾವಿರ ರೂ.ಡೀಸೆಲ್‌ ಖರ್ಚು ಹಾಕಲು ಅವಕಾಶವಿದ್ದರೂ ಆ ಮೊತ್ತವನ್ನು ನಾನೊಬ್ಬ ಶಾಸಕನಾಗಿ ಪಡೆದುಕೊಂಡಿಲ್ಲ ಎಂದರು. ಪಿಎಲ್‌ಡಿಬಿ ಬ್ಯಾಂಕ್‌ ಅಧ್ಯಕ್ಷ ಎಂ.ದೊಡ್ಡ
ಬಸವರಾಜ್‌, ಜಿ.ಪಂ ಸದಸ್ಯ ಅಮರೇಗೌಡ ವಿರೂಪಾಪುರ, ನಗರಸಭೆ ಸದಸ್ಯ ಎಚ್‌.ಬಾಷಾ,
ರಾಬಕೋ ನಿರ್ದೇಶಕರಾದ ಜಿ.ಸತ್ಯನಾರಾಯಣ, ಎಂ.ಸತ್ಯನಾರಾಯಣ, ಭೀಮನಗೌಡ, ಶ್ರೀಕಾಂತಪ್ಪ, ಜಿ.ನಾಗವೇಣಿ, ಕವಿತಾ ಗುಳಗಣ್ಣವರ್‌, ನೆಕ್ಕಂಟಿ ಸೀತಾರಾಮಲಕ್ಷ್ಮಿ, ಆತ್ಮಕೂರಿ ರವೀಂದ್ರ ಸೇರಿದಂತೆ ಇತರರು ಇದ್ದರು. ಶಿಕ್ಷಕ ವೀರೇಶ ಗೋನವಾರ ನಿರೂಪಿಸಿದರು.

ಓದಿ: ಮಕ್ಕಳ ಸಾಧನೆಯಲ್ಲಿ ತಂದೆ-ತಾಯಿ ಪಾತ್ರ ಮುಖ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next