Advertisement

Raibag: ಬಾಲಕಿಯ ಮೇಲೆ ಅತ್ಯಾಚಾರ ಪ್ರಯತ್ನ; ಸಾರ್ವಜನಿಕರಿಂದ ಬಾಲಕಿ ರಕ್ಷಣೆ; ಆರೋಪಿ ಬಂಧನ

07:13 PM Aug 26, 2024 | Team Udayavani |

ರಾಯಬಾಗ: ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ರಾಯಬಾಗ ರೈಲು ನಿಲ್ದಾಣ ಸಮೀಪದ ಖೈರವಾಡಿ ನಿವಾಸಿ ಸುನೀಲ ದೀಪಾಳೆ (27) ಎಂಬಾತನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಪಟ್ಟಣದಿಂದ ನಡೆದು ಹೋಗುತ್ತಿದ್ದ 12 ವರ್ಷದ ಬಾಲಕಿಯನ್ನು ಆತ ತನ್ನ ಬೈಕಿನಲ್ಲಿ ಕರೆದೊಯ್ಯುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿಯ ಚೀರಾಟ ಕೇಳಿ ಸಾರ್ವಜನಿಕರು ಓಡಿ ಬಂದು ಆಕೆಯನ್ನು ರಕ್ಷಿಸಿದರು.

ಪೊಲೀಸರು ಯುವಕನ ಮೇಲೆ ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next