Advertisement
ಬಂಟ್ವಾಳ ಬೈಪಾಸ್ ನಿವಾಸಿ, ವಿದ್ಯುತ್ ಗುತ್ತಿಗೆದಾರ ಚಂದ್ರಶೇಖರ (50) ಮೃತಪಟ್ಟವರಾಗಿದ್ದು, ಬಂಟ್ವಾಳ ನಿವಾಸಿ ಯೋಗೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.ರಾತ್ರಿ ಸುಮಾರು 11 ಗಂಟೆಗೆ ಸಿದ್ದಕಟ್ಟೆಯಿಂದ ಬಂಟ್ವಾಳ ಕಡೆ ಬರುತ್ತಿದ್ದ ವೇಳೆ ರಾಯಿ ಎಂಬಲ್ಲಿ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಢಿಕ್ಕಿಯಾದ ರಭಸಕ್ಕೆ ದ್ವಿಚಕ್ರ ದಲ್ಲಿ ಹಿಂಬದಿಯ ಸವಾರನಾಗಿದ್ದ ಚಂದ್ರಶೇಖರ ಅವರು ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಚಾಲಕ ಯೋಗೀಶ್ ಅವರ ತಲೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯೆ ಘಟನೆಗೆ ಕಾರಣವೆನ್ನಲಾಗಿದೆ.