ನವ ದೆಹಲಿ : ಪೆಟ್ರೋಲ್ ಬೆಲೆ ನಿರಂತರವಾಗಿ ಏರುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಮೋದಿ ಸರ್ಕಾರವನ್ನು ಟೀಕೆ ಮಾಡಲು ಟ್ವೀಟಾಸ್ತ್ರವನ್ನು ಬಳಸಿಕೊಂಡಿದ್ದಾರೆ.
“ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಕಿಕೊಳ್ಳುವಾಗ ಮೀಟರ್ ವೇಗವಾಗಿ ಏರುವುದನ್ನು ನೋಡುವಾಗ ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ, ಕಡಿಮೆಯಾಗಿದೆ ಎಂಬುವುದನ್ನು ನೆನಪಿನಲ್ಲಿಡಬೇಕು” ಎಂದು ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.
ಓದಿ: ಭಾರತದಲ್ಲಿ ಬಿಡುಗಡೆಯಾಗಿದೆ ರೆಡ್ ಮಿ 9 ಪವರ್ ..! ವಿಶೇಷತೆಗಳೇನು..?
“ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 100 ರೂ. ಆಗಿದೆ. ನಿಮ್ಮ ಪಾಕೇಟ್ ಖಾಲಿ ಮಾಡುವ ಮತ್ತು ಅದನ್ನು ತಮ್ಮ ಸ್ನೇಹಿತರಿಗೆ ಕೊಡುವ ಮೂಲಕ ಮೋದಿ ಸರ್ಕಾರ ದೊಡ್ಡ ಕೆಲಸ ಮಾಡುತ್ತಿದೆ
#FuelLootByBJP” ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಓದಿ: 65ರ ಹರೆಯದಲ್ಲೂ ಕಟ್ಟುಮಸ್ತಾದ ದೇಹ… ‘still I Am Fit’ ಎಂದ ಈ ಹಿರಿಯ ನಟ ಯಾರು ?