Advertisement

ಒಲೆ ಹೊತ್ತಿಸಿ, ಜುಮಲೆ ತಿನ್ನಿರಿ… : ಕೇಂದ್ರದ ವಿರುದ್ಧ ರಾಹುಲ್ ವ್ಯಂಗ್ಯ

04:52 PM Mar 01, 2021 | Team Udayavani |

ನವ ದೆಹಲಿ  : ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಇಂದು(ಮಾ.1, ಸೋಮವಾರ) ಮತ್ತೆ 25 ರೂ. ನಷ್ಟು ಹೆಚ್ಚಳ ಮಾಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ಎಲ್ ಪಿ ಜಿ ಯ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ (14. 2 ಕೆಜಿ) ದರವನ್ನು 819ರೂ. ಗೆ ನಿಗದಿಪಡಿಸಲಾಗಿದೆ.

Advertisement

ದೇಶದಲ್ಲಿ ನಿರಂತರವಾಗಿ ಅಡುಗೆ ಅನಿಲ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರವನ್ನು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟೀಕೆ ಮಾಡಿದ್ದಾರೆ.

ಓದಿ : ಅನುಗ್ರಹ ಯೋಜನೆ ಮತ್ತೆ ಜಾರಿ ಮಾಡದಿದ್ದರೆ ಹೋರಾಟ: ಸಿದ್ದರಾಮಯ್ಯ ಎಚ್ಚರಿಕೆ

“ಎಲ್ ಪಿ ಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. ವ್ಯವಹಾರಗಳನ್ನು ಬಂದ್ ಮಾಡಿ, ಒಲೆ ಹೊತ್ತಿಸಿ, ಜುಮಲೆ(ಒಂದು ಬಗೆಯ ತಿನಿಸು) ತಿನ್ನಿರಿ… ಇವುಗಳು ಮೋದಿ ಸರ್ಕಾರ ಜನರಿಗೆ ನೀಡುವ ಆಯ್ಕೆಗಳು” ಎಂದು ಬರೆದುಕೊಂಡಿದ್ದಾರೆ.

Advertisement

ಕಳೆದ ಫೆಬ್ರವರಿಯಲ್ಲಿ ಎಲ್ ಪಿ ಜಿ ದರ ಮೂರು ಬಾರಿ ಹೆಚ್ಚಳವಾಗಿದೆ. ನಿರಂತರವಾಗಿ ಪೆಟ್ರೋಲ್ ಹಾಗೂ ಡಿಸೇಲ್ , ಎಲ್ ಪಿ ಜಿ ದರ ಏರಿಕೆಯಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀರ್ವ ಆಕ್ರೋಶ ವ್ಯಕ್ತವಾಗುತ್ತಿದೆ.

ಓದಿ : ತಾಯಿಯ ಮೇಲೆ ಟಿ ಎಮ್ ಸಿ ಗೂಂಡಾಗಳಿಂದ ಹಲ್ಲೆ : ಬಿಜೆಪಿ ಕಾರ್ಯಕರ್ತನಿಂದ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next