Advertisement

ಐಎಎಸ್‌ನಲ್ಲಿ ರಾಜ್ಯಕ್ಕೆ ರಾಹುಲ್‌ ಟಾಪ್‌

02:32 AM Apr 06, 2019 | Sriram |

ಬೆಂಗಳೂರು: ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಒಂದಾದ “ಕೇಂದ್ರ ನಾಗರಿಕ ಸೇವಾ ಆಯೋಗ’ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಪ್ರಸಕ್ತ ಸಾಲಿಗೆ ರಾಜ್ಯದಿಂದ ಸುಮಾರು 24
ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಹುಲ್‌ ಶರಣಪ್ಪ ಸಂಕನೂರು ದೇಶಕ್ಕೆ 17ನೇ ರ್‍ಯಾಂಕ್‌ ಗಳಿಸಿದ್ದು, ರಾಜ್ಯದ ಪಾಲಿಗೆ ಮೊದಲಿಗರಾಗಿದ್ದಾರೆ.

Advertisement

ಈ ಬಾರಿ ದೇಶಾದ್ಯಂತ ಅಂದಾಜು ಐದು ಲಕ್ಷ ಅಭ್ಯರ್ಥಿಗಳು ಪ್ರಿಲಿಮಿನರಿ ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 10,648 ಅಭ್ಯರ್ಥಿಗಳು ಮೇನ್ಸ್‌ಗೆ ಉತ್ತೀರ್ಣರಾಗಿದ್ದರು. ಇವರಲ್ಲಿ ಅಂತಿಮವಾಗಿ 759 ಜನ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ಈ ಪೈಕಿ ರಾಜ್ಯದ 24 ಅಭ್ಯರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ಈ ಸಲ ರಾಜ್ಯದ ಅಭ್ಯರ್ಥಿಗಳ ಪ್ರದರ್ಶನ ತುಸು ನೀರಸವಾಗಿದೆ. ಹಿಂದಿನ ವರ್ಷ ರಾಜ್ಯದಿಂದ ಸುಮಾರು 30 ಜನ ಉತ್ತೀರ್ಣರಾಗಿದ್ದರು.

ಕಟಾರಿಯಾ ಫ‌ಸ್ಟ್‌ ರ್‍ಯಾಂಕ್‌: ಯುಪಿಎಸ್‌ಸಿ ಪರೀಕ್ಷಾ ಫ‌ಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಐಐಟಿ ಬಾಂಬೆ ಬಿಟೆಕ್‌ ಪದವೀಧರ ಕನಿಷ್‌ ಕಟಾರಿಯಾ ಮೊದಲ
ರ್‍ಯಾಂಕ್‌ ಪಡೆದಿದ್ದಾರೆ. ಐಐಟಿ ಗುವಾಹಟಿಯಿಂದ ಎಂಜಿನಿಯರಿಂಗ್‌ ಪದವಿ ಪಡೆದ ಅಕ್ಷತ್‌ ಜೈನ್‌ 2ನೇ ರ್‍ಯಾಂಕ್‌ ಪಡೆದಿದ್ದಾರೆ. ವಿದ್ಯಾರ್ಥಿನಿಯರ ವಿಭಾಗದಲ್ಲಿ ಭೋಪಾ
ಲದ ಸೃಷ್ಟಿ ಜಯಂತ್‌ ದೇಶ್‌ಮುಖ್‌ ಟಾಪರ್‌ ಆಗಿದ್ದು, ಆರನೇ ರ್‍ಯಾಂಕ್‌ ಪಡೆದಿದ್ದಾರೆ. ಮೊದಲ 25 ರ್‍ಯಾಂಕ್‌ಗಳ ಪೈಕಿ 15 ಪುರುಷ ಮತ್ತು 10 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಕರ್ನಾಟಕದ ಸಾಧಕರು
ರಾಹುಲ್‌ ಶರಣಪ್ಪ ಸಂಕನೂರು (17), ಎನ್‌. ಲಕ್ಷ್ಮೀ (45), ಎಸ್‌. ಆಕಾಶ್‌ (78), ಕೃತಿಕಾ (100),ರೋಹನ್‌ ಜಗದೀಶ್‌ (224), ಎಚ್‌.ಆರ್‌. ಕೌಶಿಕ್‌ (240), ಎಚ್‌.ಬಿ. ವಿವೇಕ್‌ (257), ನಿವೇದಿತಾ (303), ಗಿರೀಶ್‌ ಧರ್ಮರಾಜ್‌ ಕಲಗೊಂಡ (307), ಮಿರ್ಝ ಖಾದರ್‌ಬೇಗ್‌ (336), ಯು.ಪಿ. ತೇಜಸ್‌ (338), ಬಿ.ಜೆ. ಹರ್ಷವರ್ಧನ್‌ (352), ಪಕ್ಕೀರೇಶ್‌ ಕಲ್ಲಪ್ಪ ಬಾದಾಮಿ (372), ಬಿ.ಆರ್‌.ನಾಗಾರ್ಜುನಗೌಡ (418), ಬಿ.ವಿ. ಅಶ್ವಿ‌ಜಾ (423), ಆರ್‌. ಮಂಜುನಾಥ್‌ (495), ಎಸ್‌. ಬೃಂದಾ(496), ಹೇಮಂತ್‌ (612), ಎಂ.ಕೆ. ಶ್ರುತಿ (637),ವೆಂಕಟರಾಮ್‌ (694), ಎಚ್‌. ಸಂತೋಷ್‌ (753), ಎಸ್‌. ಅಶೋಕ್‌ ಕುಮಾರ್‌ (711), ಎನ್‌. ರಾಘವೇಂದ್ರ (739), ಶಶಿಕಿರಣ್‌ (754).

Advertisement

Udayavani is now on Telegram. Click here to join our channel and stay updated with the latest news.

Next