ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ ಶಿವಸೇನೆಯ ಉದ್ಧವ್ ಬಣದ ಕೆಂಗಣ್ಣಿಗೆ ಗುರಿಯಾಗಿರುವ ರಾಹುಲ್ ಗಾಂಧಿ ಅದನ್ನು ತಣಿಸಲು ಮುಂದಾಗಿದ್ದಾರೆ. ಈ ಅಂಶವನ್ನು ರಾಜ್ಯಸಭಾ ಸದಸ್ಯ ಸಂಜಯ ರಾವತ್ ನೀಡಿದ್ದಾರೆ.
“ರಾಹುಲ್ ಗಾಂಧಿ ಸೋಮವಾರ ತಮಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದರು. ರಾಜಕೀಯ ದ್ವೇಷವೇ ಹೆಚ್ಚು ಪ್ರಾಧಾನ್ಯ ಪಡೆದಿರುವ ಈ ದಿನಗಳಲ್ಲಿ ವಯನಾಡ್ ಸಂಸದರ ನಿಲುವು ಸ್ವಾಗತಾರ್ಹ. ಭಾರತ್ ಜೋಡೋ ಯಾತ್ರೆಯಂಥ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಅವರು ನನಗೆ ಫೋನ್ ಮಾಡಿದ್ದು ಸಂತೋಷ ತಂದಿದೆ’ ಎಂದು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಹೇಳಿಕೆಯಲ್ಲಿ ರಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿಯವರು ಸಾವರ್ಕರ್ ಬ್ರಿಟಿಷರಿಗೆ ಶರಣಾಗಿದ್ದರು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.