Advertisement

ರಾಹುಲ್‌, ಪ್ರಿಯಾಂಕಾ ಸೀರೆ!

12:30 AM Feb 21, 2019 | Team Udayavani |

ಸೂರತ್‌: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಹಾಗೂ ಚಿಹ್ನೆಗಳನ್ನು ಹೊಂದಿರುವ ಉಡುಪು ಹಾಗೂ ಬಟ್ಟೆಗಳು ಮಾರುಕಟ್ಟೆಗೆ ಬರುತ್ತವೆ. ಅದೇ ರೀತಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮುಖವನ್ನು ಪ್ರಿಂಟ್‌ ಮಾಡಿದ ಸೀರೆಗಳು ಮಾರುಕಟ್ಟೆಯಲ್ಲಿವೆ. ಇದೇ ರೀತಿ ಈಗ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಹಾಗೂ ರಾಹುಲ್‌ ಗಾಂಧಿಯನ್ನು ಚಿತ್ರಿಸಿರುವ ಸೀರೆಗಳೂ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈಗಾಗಲೇ ಸೂರತ್‌ನಲ್ಲಿ ಸೀರೆಗಳ ಮೇಲೆ ಈ ಪ್ರಿಂಟ್‌ ಹಾಕಲಾಗಿದೆ. ಕಾಂಗ್ರೆಸ್‌ ಬೆಂಬಲಿಗ ಹಾಗೂ ಸೀರೆ ವ್ಯಾಪಾರಿ ಗೌರವ್‌ ಶ್ರಿಮಾಲಿ ಈ ರೀತಿಯ ಸೀರೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿ¤ದ್ದಾರೆ.

Advertisement

2014 ರಲ್ಲಿ ಮೋದಿ ಚಿತ್ರವಿರುವ ಸೀರೆ ಭಾರಿ ಟ್ರೆಂಡ್‌ ಸೃಷ್ಟಿಸಿತ್ತು. ಚುನಾವಣಾ ಪ್ರಚಾರದ ವೇಳೆಯೇ ಗಾರ್ಮೆಂಟ್‌ ಫ್ಯಾಕ್ಟರಿಯೊಂದು ಈ ರೀತಿಯ ಸೀರೆಗಳನ್ನು ತಯಾರಿಸಿದ್ದು ಭಾರೀ ಜನಪ್ರಿಯತೆ ಗಳಿಸಿತ್ತು. ದೇಶಾದ್ಯಂತ ಇದು ಮಾರಾಟವೂ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next