Advertisement

ಪತನಗೊಳ್ಳಲಿದ್ದ ರಾಹುಲ್‌ ಪ್ರಯಾಣದ ವಿಮಾನ, ಅದೃಷ್ಟವಶಾತ್‌ ಪಾರು !

11:47 AM Aug 31, 2018 | Team Udayavani |

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿರುಸಿನ  ಪ್ರಚಾರಾಭಿಯಾನ ಕೈಗೊಂಡಿದ್ದ ವೇಳೆ ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೆ ಗುರಿಯಾಗುವ ಸಾಧ್ಯತೆ ಇತ್ತು; ಆದರೆ ಅದೃಷ್ಟವಶಾತ್‌ ಹಾಗಾಗಲಿಲ್ಲ, ದೇವರ ದಯೆಯಿಂದ ಅವರು ಬದುಕುಳಿದರು ಎಂಬ ಮಾಹಿತಿ ಇದೀಗ ತಡವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ ವರದಿಯ ಮೂಲಕ ಬಹಿರಂಗವಾಗಿದೆ. 

Advertisement

ವರದಿಯ ಪ್ರಕಾರ ಈ ಸಂಭಾವ್ಯ ದುರಂತ ಕಳೆದ ಎಪ್ರಿಲ್‌ 26ರಂದು ನಡೆಯುವುದಿತ್ತು. ಅಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರಾರ್ಥ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದರು. 

ರಾಹುಲ್‌ ಪ್ರಯಾಣಿಸುತ್ತಿದ್ದ ವಿಮಾನ ಹಾರಾಟದಲ್ಲಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 22 ಸೆಕೆಂಡುಗಳ ಒಳಗೆ ಈ ತಾಂತ್ರಿಕ ದೋಷವನ್ನು ಸರಿಪಡಿಸಲಾಯಿತು. ಬಳಿಕ ಪೈಲಟ್‌ ವಿಮಾನವನ್ನು  ಸುರಕ್ಷಿತವಾಗಿ ಲ್ಯಾಂಡ್‌ ಮಾಡಿಸಿದ್ದರು. ಪೈಲಟ್‌ನ ಪ್ರಸಂಗಾವಧಾನತೆಯಿಂದ ವಿಮಾನ ಪತನಗೊಳ್ಳಲಿಲ್ಲ. ರಾಹುಲ್‌ ಪಾರಾಗಿದ್ದರು. 

ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ವೇಳೆ ವಿಮಾನವು 8,000 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಮಾತ್ರವಲ್ಲದೆ ಅದು ಒಂದು ಬದಿಗೆ ವಾಲಿತ್ತು. ಒಂದೊಮ್ಮೆ ಆಗ ಕೇವಲ 20 ಸೆಕೆಂಡುಗಳಲ್ಲಿ ವಿಮಾನದ ತಾಂತ್ರಿಕ ದೋಷ ಸರಿಯಾಗದಿರುತ್ತಿದ್ದರೆ ರಾಹುಲ್‌ ವಿಮಾನ ಪತನಗೊಳ್ಳುವುದು ನಿಶ್ಚಿತವಿತ್ತು. ಆದರೆ ಅದೃಷ್ಟವಶಾತ್‌ ಹಾಗಾಗಲಿಲ್ಲ; ರಾಹುಲ್‌ ಪಾರಾದರು ಎಂದು ವರದಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next