Advertisement

ರಾಹುಲ್ ರಾಷ್ಟ್ರದ್ರೋಹಿ, ದೇಶದ ಜನತೆಯ ಕ್ಷಮೆ ಯಾಚಿಸಬೇಕು: ಸಿ.ಟಿ. ರವಿ

04:10 PM Mar 14, 2023 | Team Udayavani |

ಕಲಬುರಗಿ: ನಿಜವಾಗಲೂ ರಾಹುಲ್ ಗಾಂಧಿಯವರಿಗೆ ಸಮಸ್ಯೆ ಇದ್ದರೆ, ದೇಶದ ಜನತೆಯ ಮುಂದೆ ಹೇಳಿಕೊಳ್ಳಬೇಕಿತ್ತು. ಅದನ್ನು ಬಿಟ್ಟು, ವಿದೇಶದ ಮಾಧ್ಯಮಗಳ ಮುಂದೆ ಕುಳಿತು ದೇಶದ ಪ್ರಜಾಪ್ರಭುತ್ವದ ಕುರಿತು ಅಪನಂಬಿಕೆ ವ್ಯಕ್ತಪಡಿಸಿರುವುದು ರಾಷ್ಟ್ರದ್ರೋಹದ ಕೆಲಸ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ ರವಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬದ ಕೈಯಲ್ಲಿ ಅಧಿಕಾರ ಇದ್ದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಎನ್ನುವ ಹಗಲುಗನಸು ಕಾಣುತ್ತಿರುವ ರಾಹುಲ್ ಗಾಂಧಿಯವರು, ನಿಜಕ್ಕೂ ದೇಶದ ಜನತೆಯ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.

ನಮ್ಮ ಪಕ್ಷ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ ಸ್ವಾತಂತ್ರ್ಯಕ್ಕಾಗಿ ದೇಹವು ಮಾಡಿದೆ ಎನ್ನುವ ಕಾಂಗ್ರೆಸ್ನ ನಾಯಕರು ರಾಹುಲ್ ಗಾಂಧಿಯವರ ಒಳ ನೀತಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಇದನ್ನೂ ಓದಿ:ತೇರದಾಳ ಮತಕ್ಷೇತ್ರಕ್ಕೆ ಸಿದ್ದು ಸವದಿ ಅಭ್ಯರ್ಥಿ – ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ

ಕರ್ನಾಟಕ ರಾಜ್ಯಕ್ಕೆ ಮೋದಿಯವರು ಪದೇ ಪದೇ ಆಗಮಿಸುತ್ತಿದ್ದಾರೆ ಎನ್ನುವ ಸಿದ್ಧರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಿ.ಟಿ.ರವಿ, ನರೇಂದ್ರ ಮೋದಿ ಹೋದಲೆಲ್ಲ ಬಿಜೆಪಿ ಗೆಲ್ಲುತ್ತದೆ. ನರೇಂದ್ರ ಮೋದಿಯವರು ಅಧಿಕಾರ ಇದ್ದ ರಾಜ್ಯದಲ್ಲೂ, ಅಧಿಕಾರ ಇಲ್ಲದ ರಾಜ್ಯಗಳಿಗೂ ಭೇಟಿ ನೀಡುತ್ತಿದ್ದಾರೆ. ಅವರ ಭೇಟಿಯಿಂದ ನಮಗೆ ಲಾಭವಾಗುತ್ತದೆ.ಅವರ ಆದರ್ಶ ಮತ್ತು ಅಭಿವೃದ್ಧಿಯ ಮುನ್ನೋಟಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಸಮರ್ಥನೆ ಮಾಡಿ ಕೊಂಡರಲ್ಲದೆ, ಪಾಪ ರಾಹುಲ್ ಗಾಂಧಿ ಅವರು ಬಂದ ಕಡೆಯಲ್ಲ ಕಾಂಗ್ರೆಸ್ ಮುಖಂಡ ಮಲಗುತ್ತಿದೆ. ಅಲ್ಲದೆ, ಅವರ ಉಲ್ಟಾ ಪಲ್ಟಾ ಮಾತನಾಡುವ ರೀತಿಯಿಂದಾಗಿ ಉಂಟಾಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಸ್ಥಳೀಯ ನಾಯಕರು ಒದ್ದಾಡಬೇಕಾಗುತ್ತದೆ ಎಂದು ಗೇಲಿ ಮಾಡಿದರು.

Advertisement

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ಅರ್ಕಾವತಿ ಲೇಔಟ್ ಹಗರಣದಲ್ಲಿ ರಾಜ್ಯದ ಬೊಕ್ಕಸಕ್ಕೆ ಎಂಟು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೆಂಪಣ್ಣ ಆಯೋಗ ವರದಿ ನೀಡಿದೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಆ ವರದಿಯನ್ನು ಏಕೆ ಒಪ್ಪಿಕೊಳ್ಳಲಿಲ್ಲ? ತನಿಖೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿ ಮಡು ಎಂಎಲ್ಸಿ ಸುಶೀಲ್ ನಮೋಶಿ, ಬಿ ಜಿ ಪಾಟೀಲ್ ಮಾಲಿಕಯ್ಯ ಗುತ್ತೇದಾರ್, ಎನ್ ರವಿ ಕುಮಾರ್ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next