Advertisement

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

06:00 PM Mar 24, 2023 | Team Udayavani |

ಮಂಗಳೂರು: ರಾಹುಲ್ ಗಾಂಧಿಯನ್ನು ಸಂಸದರಾಗಿ ಅನರ್ಹಗೊಳಿಸಿ ಆದೇಶ ನೀಡಿರುವುದು ಸಂಸದೀಯ ನಿಯಮ ಹಾಗೂ ಪ್ರಜಾಪ್ರಭುತ್ವ ಕಗ್ಗೊಲೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

Advertisement

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಸರ್ ನೇಮ್’ ಹೇಳಿಕೆ ಪ್ರಕರಣದಲ್ಲಿ ೨ ವರ್ಷ ಜೈಲು ಶಿಕ್ಷೆ ಘೋಷಿಸಿರುನ ಕೋರ್ಟ್ ಮೇಲ್ಮನವಿ ಸಲ್ಲಿಸಲು ೩೦ ದಿನಗಳ ಅವಕಾಶ ನೀಡಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನಾನೇನೂ ಹೇಳಲಾರೆ. ಆದರೆ, ನ್ಯಾಯಾಲಯವೇ ಆದೇಶವನ್ನು ಅಮಾನತ್ತಿನಲ್ಲಿರಿಸಿ ಮೇಲ್ಮನವಿಗೆ ಅವಕಾಶ ನೀಡಿರುವಾಗ ಸಂಸದ ಸ್ಥಾನದಿಂದ ಅರ್ಹಗೊಳಿಸಿರುವ ಪ್ರಕ್ರಿಯೆ ಮುಂದೆ ದೇಶದ ಪ್ರತಿಯೊಂದು ಸಂಸದರಿಗೂ ಅನ್ವಯವಾಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಇದನ್ನೂ ಓದಿ: ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

ರಾಹುಲ್ ಗಾಂಧಿ ಸತ್ಯ ಮಾತನಾಡಿದರೆ ಬಿಡದವರು ಇನ್ನು ಜನಸಾಮಾನ್ಯರಿಗೆ ಬಿಡಬಹುದೇ ಎಂದು ಪ್ರಶ್ನಿಸಿದ ಅವರು, ದೇಶದ ಜನತೆ ರಾಹುಲ್ ಗಾಂಧಿಯನ್ನು ಭವಿಷ್ಯದ ನಾಯಕ ಎಂದು ಬಿಂಬಿಸುತ್ತಿರುವಾಗ ಭಯದಿಂದ ಈ ರೀತಿಯ ಕೃತ್ಯ ಎಸಗಲಾಗುತ್ತಿದೆ.

ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ. ಸತ್ಯ ಮಾತನಾಡುವ ರಾಹುಲ್ ಜತೆಗೆ ಕಾಂಗ್ರೆಸ್‌ನ ಪ್ರತಿಯೊಬ್ಬರೂ ಇದ್ದಾರೆ ಎಂದವರು ಹೇಳಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್, ರಫೀಕ್ ಅಂಬ್ಲಮೊಗರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next