Advertisement

ಚೀತಾ ಬಂದವು,16 ಕೋಟಿ ಉದ್ಯೋಗಗಳು ಯಾವಾಗ?: ಪ್ರಧಾನಿಗೆ ರಾಹುಲ್ ಪ್ರಶ್ನೆ

07:42 PM Sep 17, 2022 | Team Udayavani |
ಕೊಲ್ಲಂ:ನಮೀಬಿಯಾದಿಂದ ತರಲಾದ ಚಿರತೆಗಳ ಪೈಕಿ ಮೂರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣದಲ್ಲಿ ಶನಿವಾರ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು”ಎಂಟು ವರ್ಷಗಳಲ್ಲಿ16 ಕೋಟಿ ಉದ್ಯೋಗಗಳನ್ನು ಏಕೆ ನೀಡಲಿಲ್ಲ” ಎಂದು ಪ್ರಶ್ನಿಸಿದ್ದಾರೆ.

”8 ಚಿರತೆಗಳು ಬಂದಿವೆ. ಈಗ ಹೇಳಿ 8 ವರ್ಷದಲ್ಲಿ 16 ಕೋಟಿ ಉದ್ಯೋಗ ಯಾಕೆ ನೀಡಲಿಲ್ಲ? ಯುವಕರಿಗೆ ಸವಾಲಿದೆ, ಅವರಿಗೆ ಉದ್ಯೋಗ ಸಿಗಲಿದೆಯೇ ,” ಎಂದು ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ಯಲ್ಲಿರುವ ಗಾಂಧಿ, “ರಾಷ್ಟ್ರೀಯ ನಿರುದ್ಯೋಗ ದಿನ” ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Advertisement

ಇದನ್ನೂ ಓದಿ: ಚೀತಾದ ವೇಗದಲ್ಲಿ ಚಲಿಸಬೇಕಾಗಿದೆ: ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಗೆ ಪ್ರಧಾನಿ ಚಾಲನೆ

ಪ್ರಧಾನಿ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ಅನ್ನು “ರಾಷ್ಟ್ರೀಯ ನಿರುದ್ಯೋಗ ದಿನ” ಎಂದು ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ. ”ಭಾರತ್ ಜೋಡೋ” ಯಾತ್ರೆಯ ಎಂಟನೇ ದಿನದ ಕೊನೆಯಲ್ಲಿ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದ್ವೇಷದ ರಾಜಕೀಯದಿಂದಾಗಿ ಭಾರತವು ತನ್ನ ಅತ್ಯಂತ ಕೆಟ್ಟ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂದರು.

”ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ರಾಹುಲ್ ಟ್ವೀಟ್ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next