ನವ ದೆಹಲಿ : ಪೆಟ್ರೋಲ್, ಡಿಸೇಲ್ ಹಾಗೂ ಸಿಲಿಂಡರ್ ಬೆಲೆ ಏರಿಕೆಯ ಹಿನ್ನಲೆಯಲ್ಲಿ ಕೇರಳದ ವಯನಾಡಿನ ಸಂಸದ ರಾಹುಲ್ ಗಾಂಧಿ ಮತ್ತೆ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆ(ಸೊಮವಾರ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ 50 ರೂ ಏರಿಕೆ ಕಂಡಿತ್ತು, ಆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ರಾಹುಲ್ ಟೀಕಿಸಿದ್ದರು.
ಓದಿ : ಹುಣಸೂರು: ಮುಂದುವರೆದ ಕಾಡಾನೆ ಪುಂಡಾಟ : ಜಖಂಗೊಂಡ ಟ್ರ್ಯಾಕ್ಟರ್, ಕಾರು
ಇಂದು (ಮಂಗಳವಾರ, ಫೆ.16) ಮತ್ತೆ ರಾಹುಲ್ ಗಾಂಧಿ ಇಂಧನ ಬೆಲೆ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸುವುದನ್ನು ಮುಂದುವರಿಸಿದ್ದಾರೆ.
ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದೆ. ಜನರು ಕಷ್ಟದಲ್ಲಿದ್ದಾರೆ. ಎಲ್ಲಿದೆ ಅಚ್ಛೆ ದಿನ್ ? ಎಂದು ಅವರು ಮಾರ್ಮಿಕವಾಗಿ ಕೇಳಿದ್ದಾರೆ.
“ಇಬ್ಬರ ವಿಕಾಸಕ್ಕಾಗಿ ಮೋದಿ ಸರ್ಕಾರ ಜನರ ಲೂಟಿ ಮಾಡಲು ನಿರ್ಧರಿಸಿದೆ” (मोदी सरकार ने ठाना है जनता को लूटते जाना है बस ‘दो’ का विकास कराना है।)ಎಂದು ರಾಹುಲ್ ಟ್ವೀಟ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಇಂಧನ ಬೆಲೆ ಏರಿಕೆಗೆ ಸಂಬಂಧ ಪಟ್ಟಂತೆ, ನಿನ್ನೆ(ಸೋಮವಾರ) ಕೂಡ “ಜನರ ಲೂಟಿ, ಇಬ್ಬರ ವಿಕಾಸ” ಎಂದು ರಾಹುಲ್ ಟ್ವೀಟ್ ಮಾಡಿದ್ದರು.
ಓದಿ : ಭಾರತದಲ್ಲಿ ಬಿಡುಗಡೆಗೊಂಡಿದೆ “BMW X3 xDrive30i SportX”