Advertisement

ಅ.22, 23 ರಂದು ರಾಹುಲ್ ಗಾಂಧಿ ರಾಯಚೂರಿನಲ್ಲಿ ವಾಸ್ತವ್ಯ

01:52 PM Sep 12, 2022 | Team Udayavani |

ರಾಯಚೂರು: ಕಾಂಗ್ರೆಸ್ ನಿಂದ ಆರಂಭಿಸಿರುವ ”ಭಾರತ್ ಜೋಡೋ” ಯಾತ್ರೆ ಅ.22,23ರಂದು ರಾಯಚೂರು ಜಿಲ್ಲೆಗೆ ಆಗಮಿಸಲಿದ್ದು, ಎಐಸಿಸಿ ಕಾರ್ಯದರ್ಶಿ ರಾಹುಲ್ ಗಾಂಧಿ ವಾಸ್ತವ್ಯ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಗಿಲ್ಲೆಸೂಗೂರು ಮಾರ್ಗವಾಗಿ ಆಗಮಿಸಿ ಶಕ್ತಿನಗರ ಮಾರ್ಗವಾಗಿ ತೆಲಂಗಾಣಕ್ಕೆ ಯಾತ್ರೆ ತೆರಳಲಿದೆ. ರಾಜ್ಯದಲ್ಲಿ 510 ಕಿಮೀ ಯಾತ್ರೆ ನಡೆಯಲಿದ್ದು, ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎರಡು ರಾತ್ರಿ ಉಳಿಯಲಿರುವ ರಾಹುಲ್ ಗಾಂಧಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಹಳೆ ಮೈಸೂರು ಭಾಗ ಮತ್ತು ರಾಯಚೂರಲ್ಲಿ ಮಾತ್ರ ಸಂವಾದ ನಡೆಯಲಿದೆ ಎಂದರು.

ಶಾಸಕರು, ಮಾಜಿ ಶಾಸಕರಿಗೆ ಶಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಯಾತ್ರೆಯಲ್ಲಿ ರಾಯಚೂರು ಜತೆಗೆ ಕಲಬುರಗಿ, ಯಾದಗಿರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳ ಮುಖಂಡರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next