ಲಂಡನ್: ಲಂಡನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಈ ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಒಂದು ‘ಮೂಲಭೂತವಾದಿ ಮತ್ತು ಫ್ಯಾಸಿಸ್ಟ್’ ಸಂಘಟನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲಂಡನ್ ನ ಚತ್ತಮ್ ಹೌಸ್ ನಲ್ಲಿ ಮಾತನಾಡಿದ ರಾಹುಲ್, ಆರ್ ಎಸ್ಎಸ್ ಭಾರತದ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿದರು
ಭಾರತದಲ್ಲಿ ಪ್ರಜಾಸತ್ತಾತ್ಮಕ ಸ್ಪರ್ಧೆಯ ಸ್ವರೂಪವು ಸಂಪೂರ್ಣವಾಗಿ ಬದಲಾಗಿದೆ. ಅದಕ್ಕೆ ಕಾರಣವೆಂದರೆ ಆರ್ ಎಸ್ಎಸ್ ಎಂಬ ಒಂದು ಸಂಘಟನೆ. ಮೂಲಭೂತವಾದಿ, ಫ್ಯಾಸಿಸ್ಟ್ ಸಂಘಟನೆಯು ಭಾರತದ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದಿದ್ದಾರೆ.
ಇದನ್ನೂ ಓದಿ:ಬಿಲ್ಲಿ ಜೀನ್ ಕಿಂಗ್ ಕಪ್ ಟೆನಿಸ್: ಭಾರತ ತಂಡದಲ್ಲಿ ವೈದೇಹಿ ಚೌಧರಿ
Related Articles
“ಭಾರತದಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡಬಹುದು, ಅದನ್ನು ಕಾಂಗ್ರೆಸ್ ಹೇಳುತ್ತಿಲ್ಲ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಗಂಭೀರ ಸಮಸ್ಯೆ ಇದೆ ಎಂದು ವಿದೇಶಿ ಪತ್ರಿಕೆಗಳಲ್ಲಿ ಸಾರ್ವಕಾಲಿಕ ಲೇಖನಗಳು ಬರುತ್ತಿವೆ ಎಂದರು.
“ನಮ್ಮ ದೇಶದ ವಿವಿಧ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವಲ್ಲಿ ಅವರು ಎಷ್ಟು ಯಶಸ್ವಿಯಾಗಿದ್ದಾರೆ ಎಂಬುದು ನನಗೆ ಆಘಾತವನ್ನುಂಟು ಮಾಡಿದೆ. ಪತ್ರಿಕಾರಂಗ, ನ್ಯಾಯಾಂಗ, ಸಂಸತ್ತು ಮತ್ತು ಚುನಾವಣಾ ಆಯೋಗಗಳು ಅವರಿಂದ ಬೆದರಿಕೆಗೆ ಒಳಗಾಗಿವೆ. ಒಂದಲ್ಲ ಒಂದು ರೀತಿಯಲ್ಲಿ ನಿಯಂತ್ರಿಸಲ್ಪಡುತ್ತವೆ” ಎಂದು ರಾಹುಲ್ ಗಾಂಧಿ ಹೇಳಿದರು.