Advertisement

ರೈಲು ದುರಂತದ ಬಗ್ಗೆ ಕೇಳಿದರೆ ಬಿಜೆಪಿಯವರು ಕಾಂಗ್ರೆಸ್ ಮೇಲೆ ಆಪಾದನೆ ಮಾಡುತ್ತಾರೆ: ರಾಹುಲ್

03:07 PM Jun 05, 2023 | Team Udayavani |

ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಡಿಶಾ ತ್ರಿವಳಿ ರೈಲು ದುರಂತ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಭಾನುವಾರ ನ್ಯೂಯಾರ್ಕ್‌ ನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಯಾವಾಗಲೂ ಹಿಂತಿರುಗಿ ನೋಡಿ ಆಪಾದನೆಯನ್ನು ಬೇರೆಯವರಿಗೆ ಹೊರಿಸುತ್ತದೆ ಎಂದು ಹೇಳಿದರು.

Advertisement

“ನೀವು ಬಿಜೆಪಿಯವರನ್ನು ಏನನ್ನಾದರೂ ಕೇಳಿ, ಅವರು ಹಿಂದಿನವರಿಗೆ ಆರೋಪವನ್ನು ಹೊರಿಸುತ್ತಾರೆ. ರೈಲು ಅಪಘಾತ ಏಕೆ ಸಂಭವಿಸಿತು ಎಂದು ಅವರನ್ನು ಕೇಳಿ, ಅವರು ಇದನ್ನು 50 ವರ್ಷಗಳ ಹಿಂದೆ ಕಾಂಗ್ರೆಸ್ ಮಾಡಿದೆ ಎಂದು ಹೇಳುತ್ತಾರೆ” ಎಂದು ರಾಹುಲ್ ಹೇಳಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ರೈಲು ದುರಂತದ ಬಗ್ಗೆಯೂ ರಾಹುಲ್ ಗಾಂಧಿ ಪ್ರಸ್ತಾಪಿಸಿದರು. ರೈಲ್ವೆ ಅಪಘಾತದ ಹಿನ್ನೆಲೆಯಲ್ಲಿ ಅಂದಿನ ರೈಲ್ವೆ ಸಚಿವರು ನೈತಿಕ ಹೊಣೆ ಹೊತ್ತು ಕಚೇರಿಯಿಂದ ಕೆಳಗಿಳಿದಿದ್ದರು. ತಮ್ಮ ಪಕ್ಷವು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದರು. ಈ ಮೂಲಕ ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದ ನಂತರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಆಗ್ರಹಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈಲು ಅಪಘಾತ ನಡೆದಿದ್ದು ನೆನಪಿದೆ. ಈಗ ಬ್ರಿಟಿಷರಿಂದಲೇ ರೈಲು ಅಪಘಾತವಾಗಿದೆ’ ಎಂದು ಕಾಂಗ್ರೆಸ್ ನವರು ಎದ್ದು ಹೋಗಲಿಲ್ಲ. ಇದು ನನ್ನ ಜವಾಬ್ದಾರಿ ಮತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಾಂಗ್ರೆಸ್ ಸಚಿವರು ಹೇಳಿದ್ದಾರೆ. ಹಾಗಾಗಿ ಇದು ನಮ್ಮ ತವರಿನ ಸಮಸ್ಯೆಯಾಗಿದೆ, ನಾವು ವಾಸ್ತವವನ್ನು ನಾವು ಒಪ್ಪಿಕೊಳ್ಳುತ್ತಿಲ್ಲ” ಎಂದು ರಾಹುಲ್ ಗಾಂಧಿ ನ್ಯೂಯಾರ್ಕ್ ನಲ್ಲಿ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next