Advertisement

ಭಾರತ್ ಜೋಡೋ : ಪಾದಯಾತ್ರೆಯಲ್ಲಿ ಬಾಲಕಿಯ ಚಪ್ಪಲಿ ಸರಿ ಮಾಡಿದ ರಾಹುಲ್

04:02 PM Sep 18, 2022 | Team Udayavani |

ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ” 11ನೇ ದಿನದ ಯಾತ್ರೆ ಭಾನುವಾರ ಕೇರಳದ ಹರಿಪಾದ್ ನಿಂದ ನಡೆಯುತ್ತಿದೆ. ಪಾದಯಾತ್ರೆಯಲ್ಲಿ ತನ್ನೊಂದಿಗೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ ನಡೆಯಲು ಕಷ್ಟಪಟ್ಟಾಗ ರಾಹುಲ್ ಅವರು ಚಪ್ಪಲಿ ಸರಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು,ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ನಾಯಕನ ಸರಳತೆ ಎಂದು ಹಂಚಿಕೊಂಡಿದ್ದಾರೆ.

Advertisement

ಇದನ್ನೂ ಓದಿ: ಟಿಕೆಟ್ ನೀಡುವುದು ಒಬ್ಬರ ನಿರ್ಧಾರವಲ್ಲ: ಡಿಕೆಶಿ ಹೇಳಿಕೆಗೆ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ

ಬೆಳಗ್ಗೆ 6. 30 ರ ನಂತರ ಪ್ರಾರಂಭವಾದ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರನ್ನು ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಿದ್ದ ಜನರು ಸ್ವಾಗತಿಸುತ್ತಿರುವುದು ಕಂಡುಬಂದರೆ, ಇನ್ನು ಕೆಲವೆಡೆ ಅವರು ಮೆರವಣಿಗೆಯಿಂದ ವಿರಾಮ ತೆಗೆದುಕೊಂಡು ಹೋಟೆಲ್‌ಗಳಲ್ಲಿ
ಚಹಾ ಸವಿದರು.

ಪಕ್ಷದ ಇತರ ಕಾರ್ಯಕರ್ತರು ಮತ್ತು ನಾಯಕರ ಜೊತೆಯಲ್ಲಿ ನಡೆಯುತ್ತಿರುವ ಬಾಲಕಿ ಸ್ವಲ್ಪ ಸಮಯದ ನಂತರ, ಥಟ್ಟನೆ ನಿಂತಿದ್ದು, ರಾಹುಲ್ ಅವರು ಕೆಳಗೆ ಬಾಗಿ ಅವರ ಪಕ್ಕದಲ್ಲೆ ನಡೆಯುತ್ತಿದ್ದ ಹುಡುಗಿಗೆ ಸಹಾಯ ಮಾಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next