Advertisement

ಹಿಂಸಾಚಾರ ಪೀಡಿತ ಮಂದ್ ಸೌರ್ ಭೇಟಿಗೆ ಯತ್ನ, ರಾಹುಲ್ ಗಾಂಧಿ ರಿಲೀಸ್

02:51 PM Jun 08, 2017 | Team Udayavani |

ಮಂದ್ ಸೌರ್(ಮಧ್ಯಪ್ರದೇಶ): ಬೆಂಬಲ ಬೆಲೆಗೆ ಒತ್ತಾಯಿಸಿ ಮಧ್ಯಪ್ರದೇಶದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಗೋಲಿಬಾರ್ ಐವರು ರೈತರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ಪೀಡಿತ ಮಂದ್ ಸೌರ್ ಗೆ ಭೇಟಿ ನೀಡಲು ತೆರಳುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಮಧ್ಯಪ್ರದೇಶ ಪೊಲೀಸರು ಗುರುವಾರ ನಯಾಗಾಂವ್ ನಲ್ಲಿ ಬಂಧಿಸಿದ್ದಾರೆ.

Advertisement

ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ರಾಜಸ್ಥಾನ್, ಮಧ್ಯಪ್ರದೇಶ ಗಡಿಪ್ರದೇಶದಲ್ಲಿ ವಶಕ್ಕೆ ಪಡೆದು ರಹಸ್ಯ ಸ್ಥಳಕ್ಕೆ ಕರೆದೊಯ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಬಂಧನಕ್ಕೊಳಗಾದ ಸುಮಾರು 3ಗಂಟೆಯ ಬಳಿಕ ರಾಹುಲ್ ಗಾಂಧಿ ಅವರನ್ನು ಜಾಮೀನಿನ ಮೇಲೆ ಪೊಲೀಸರು ಬಿಡುಗಡೆಗೊಳಿಸಿ, ಗೋಲಿಬಾರ್ ನಲ್ಲಿ ಬಲಿಯಾದ ರೈತರ ಕುಟುಂಬಸ್ಥರ ಭೇಟಿ ಮಾಡಲು ಅವಕಾಶ ನೀಡಿರುವುದಾಗಿ ವರದಿ ವಿವರಿಸಿದೆ.

ರಾಜಸ್ಥಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಪೈಲಟ್, ಕಾಂಗ್ರೆಸ್ ಹಿರಿಯ ಮುಖಂಡರಾದ ದಿಗ್ವಿಜಯ್ ಸಿಂಗ್, ಕಮಲ್ ನಾಥ್ ಸಿಂಗ್ ಹಾಗೂ ಶರದ್ ಯಾದವ್ ಅವರನ್ನೂ ಕೂಡಾ ಪೊಲೀಸರು ನೀಮುಚ್ ನಲ್ಲಿ ತಡೆದು ವಶಕ್ಕೆ ತೆಗೆದುಕೊಂಡಿರುವುದಾಗಿ ಮೂಲಗಳು ಹೇಳಿವೆ.

ರಾಜ್ಯದಲ್ಲಿ ರೈತರನ್ನು ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದೆ. ನಾನು ಆ ಪ್ರದೇಶಕ್ಕೆ ಹೋಗಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತರ 1. 5 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲವನ್ನು ಮಾತ್ರ ಮನ್ನಾ ಮಾಡೋದಿಲ್ಲ ಎಂದು ರಾಹುಲ್ ಗಾಂಧಿ ಸುದ್ದಿಗಾರರ ಜೊತೆ ಮಾತನಾಡುತ್ತ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಪೊಲೀಸರು ನನಗೆ ಯಾವುದೇ ಕಾರಣ ಕೊಟ್ಟಿಲ್ಲ, ಆದರೂ ನನ್ನ ಬಂಧಿಸಿದ್ದಾರೆ. ಉತ್ತರಪ್ರದೇಶದಲ್ಲಿಯೂ ಕೂಡಾ ಇದೇ ರೀತಿ ಮಾಡಿರುವುದಾಗಿ ರಾಹುಲ್ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next