Advertisement

ಯುವ ಆಟಗಾರರು ನೀಡುವ ತಲೆಬಿಸಿ ಬಗ್ಗೆ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್

12:12 PM Dec 06, 2021 | Team Udayavani |

ಮುಂಬೈ: ಭಾರತ ಟೆಸ್ಟ್ ತಂಡದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತಿರುವುದು ಸಂತಸ ತಂದಿದೆ. ಇದು ಮುಂದುವರಿಯಬೇಕು ಮತ್ತು ಆಟಗಾರರು ತಮ್ಮ ಉತ್ತಮ ಪ್ರದರ್ಶನದಿಂದ ತಂಡದ ಆಯ್ಕೆಗೆ “ತಲೆನೋವು” ಉಂಟುಮಾಡಬೇಕು ಎಂದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಡ್ ಅಭಿಪ್ರಾಯಪಟ್ಟಿದ್ದಾರೆ.

Advertisement

ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ದಾಖಲೆಯ 372 ರನ್‌ಗಳ ಜಯ ಸಾಧಿಸುವ ಮೂಲಕ 1-0 ಸರಣಿಯನ್ನು ವಶಪಡಿಸಿಕೊಂಡಿದೆ.

ತವರಿನಲ್ಲಿ ಭಾರತಕ್ಕೆ ಇದು ಸತತ 14ನೇ ಸರಣಿ ಜಯವಾಗಿದೆ. ಮೊದಲ ಪಂದ್ಯದಲ್ಲಿ ಪದಾರ್ಪಣೆಗೈದ ಶ್ರೇಯಸ್ ಅಯ್ಯರ್ ಶತಕ ಮತ್ತು ಅರ್ಧ ಶತಕ ಬಾರಿಸಿದರೆ, ತಂಡದಲ್ಲಿ ಸ್ಥಾನ ಪಡೆಯಲು ಕಷ್ಟ ಪಡುತ್ತಿದ್ದ ಮಯಾಂಕ್ ಅಗರ್ವಾಲ್ ಎರಡನೇ ಟೆಸ್ಟ್ ನಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿದ್ದಾರೆ. ರೋಹಿತ್ ಶರ್ಮಾ ವಿಶ್ರಾಂತಿ ಪಡೆದ ಕಾರಣ ಸ್ಥಾನ ಪಡೆದಿದ್ದ ಶುಭ್ಮನ್ ಗಿಲ್ ಕೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ಸರಣಿಗೆ ರೋಹಿತ್ ಮತ್ತು ಕೆ.ಎಲ್.ರಾಹುಲ್ ಮರಳಿ ಬರುವ ಕಾರಣ ಆರಂಭಿಕ ಎರಡು ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

“ಹುಡುಗರು ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳುವುದನ್ನು ನೋಡಲು ಅದ್ಭುತವಾಗಿದೆ. ಜಯಂತ್ ಯಾದವ್ ರವಿವಾರದ ಆಟದಲ್ಲಿ ಕಷ್ಟಪಟ್ಟಿದ್ದರು, ಆದರೆ ಇಂದು ಅದರಿಂದ ಕಲಿತರು. ಮಯಾಂಕ್, ಶ್ರೇಯಸ್, ಸಿರಾಜ್, ಯಾರು ಹೆಚ್ಚು ಅವಕಾಶಗಳನ್ನು ಪಡೆಯುವುದಿಲ್ಲ. ಅಕ್ಷರ್ ಬೌಲಿಂಗ್ ಮಾತ್ರವಲ್ಲದೆ ಬ್ಯಾಟ್‌ನೊಂದಿಗೆ ಅವರ ಬೆಳವಣಿಗೆಯನ್ನು ನೋಡಲು ಅದ್ಭುತವಾಗಿದೆ. ಇದು ನಮಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ, ನಾವು ಬಲಿಷ್ಠ ತಂಡವಾಗಲು ಸಹಾಯ ಮಾಡುತ್ತದೆ “ಎಂದು ಪಂದ್ಯದ ನಂತರ ದ್ರಾವಿಡ್ ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next