Advertisement

“ರಾಹುಲ್‌ ಬಳಿ ಡ್ರೈವಿಂಗ್‌ ಲೈಸನ್ಸೇ ಇಲ್ಲ’

12:30 AM Dec 31, 2018 | Team Udayavani |

ಹೊಸದಿಲ್ಲಿ: “2019ರ ಮಹಾ ಚುನಾವಣೆಯಲ್ಲಿ ತೃತೀಯ ರಂಗದ ಸದಸ್ಯರಿರುವ ವಾಹನ ಚಲಾಯಿಸುವ ಜವಾಬ್ದಾರಿ ಹೊತ್ತಿರುವ ಚಾಲಕನ ಬಳಿ ಚಾಲನಾ ಪರವಾನಗಿಯೇ ಇಲ್ಲ” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವ ಮುಕ್ತಾರ್‌ ಅಬ್ಟಾಸ್‌ ನಖೀÌ ವ್ಯಂಗ್ಯವಾಡಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಹುಲ್‌ ಅವರು ನಾಲ್ಕು ದಿನ ಕೆಲಸ ಮಾಡಿ ನಾಲ್ಕು ತಿಂಗಳು ಪ್ರವಾಸ ಹೋಗುತ್ತಾರೆ. ಮೋದಿ ಯವರು ಪ್ರಧಾನಿಯಾಗಿ ನಾಲ್ಕೂವರೆ ವರ್ಷಗಳಾದರೂ ಒಂದು ದಿನವೂ ರಜೆ ತಗೆದುಕೊಂಡಿಲ್ಲ. ಇದೇ ಇವರಿಬ್ಬರ ನಡುವಿನ ಪ್ರಮುಖ ವ್ಯತ್ಯಾಸ” ಎಂದಿದ್ದಾರೆ. 

Advertisement

ಪಿಎಂ ಆಗಬಲ್ಲರು: ರಾಹುಲ್‌ ಗಾಂಧಿಯವರಿಗೆ ಪ್ರಧಾನಿ ಹುದ್ದೆ ನೀಡಿದರೆ ಅವರು ಅದನ್ನು ದಕ್ಷವಾಗಿ ನಿಭಾಯಿಸಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅಭಿ ಯಿಸಿದ್ದಾರೆ. ಸುದ್ದಿ ಸಂಸ್ಥೆ ಸಂದ ನದಲ್ಲಿ ಮಾತಾಡಿದ ಅವರು,  2019ರ ನಂತರವಷ್ಟೇ ಕಾಂಗ್ರೆಸ್‌ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯ ನಿರ್ಧಾರವಾಗುತ್ತದೆ ಎಂದಿದ್ದಾರೆ. 

ಸದ್ಯದಲ್ಲೇ ವಿವರಣೆ: ಚುನಾ ವಣೆಗೆ ಉತ್ತರ ಪ್ರದೇಶದಲ್ಲಿ ಬಿ  ಎಸ್‌ಪಿ, ಎಸ್‌ಪಿ ನಡುವೆ ಮೈತ್ರಿ ಏರ್ಪ ಡುವ ವಿಚಾರದ ಬಗ್ಗೆ ಪ್ರತಿಕ್ರಿ ಯಿ ಸಿರುವ ಎಸ್‌ಪಿ ನಾಯಕ ಅಖೀ ಲೇಶ್‌ ಯಾದವ್‌, ಶೀಘ್ರದಲ್ಲೇ ವಿವರ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next