Advertisement

ಅಫ್ಘಾನ್‌ ಪರ ಮೊದಲ ಶತಕ ಬಾರಿಸಿದ ಶಾ

11:04 PM Sep 05, 2019 | Sriram |

ಚಿತ್ತಗಾಂಗ್‌: ರಹಮತ್‌ ಶಾ ಅಫ್ಘಾನಿಸ್ಥಾನ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಗುರುವಾರ ಚಿತ್ತಗಾಂಗ್‌ನಲ್ಲಿ ಮೊದಲ್ಗೊಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಶಾ 102 ರನ್‌ ಹೊಡೆದರು. ಮೊದಲ ದಿನದಾಟದ ಅಂತ್ಯಕ್ಕೆ ಅಫ್ಘಾನ್‌ 5 ವಿಕೆಟಿಗೆ 271 ರನ್‌ ಗಳಿಸಿದೆ.

Advertisement

3ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ರಹಮತ್‌ ಶಾ 187 ಎಸೆತ ನಿಭಾಯಿಸಿದರು. ಇದರಲ್ಲಿ 10 ಬೌಂಡರಿ, 2 ಸಿಕ್ಸರ್‌ ಸೇರಿತ್ತು. ಅಸYರ್‌ ಅಫ್ಘಾನ್‌ 88, ಅಫಾÕರ್‌ ಜಜಾಯ್‌ 35 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ರಶೀದ್‌ ಕಿರಿಯ ನಾಯಕ ಇದೇ ವೇಳೆ ಅಫ್ಘಾನಿಸ್ಥಾನವನ್ನು ಮುನ್ನಡೆಸಿದ ರಶೀದ್‌ ಖಾನ್‌ ಟೆಸ್ಟ್‌ ಚರಿತ್ರೆಯ ಅತೀ ಕಿರಿಯ ನಾಯಕನೆಂಬ ದಾಖಲೆ ಸ್ಥಾಪಿಸಿದರು (20 ವರ್ಷ, 350 ದಿನ). ಜಿಂಬಾಬ್ವೆಯ ಟಟೆಂಡ ಟೈಬು ಅವರ 20 ವರ್ಷ, 358ನೇ ದಿನದ ನಾಯಕತ್ವದ ದಾಖಲೆ ಪತನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next