Advertisement

Ragini Prajwal: ಶ್ಯಾನುಭೋಗರ ಮಗಳ ಮೇಲೆ ರಾಗಿಣಿ ನಿರೀಕ್ಷೆ

03:35 PM Nov 11, 2024 | Team Udayavani |

ರಾಗಿಣಿ ಪ್ರಜ್ವಲ್‌ ನಾಯಕಿಯಾಗಿ ನಟಿಸಿರುವ “ಶ್ಯಾನುಭೋಗರ ಮಗಳು’ ಚಿತ್ರದ ಟ್ರೇಲರ್‌ ಹಾಗೂ ಟೈಟಲ್‌ ಸಾಂಗ್‌ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಭಾಗ್ಯ ಕೃಷ್ಣಮೂರ್ತಿ ಅವರು ಬರೆದ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಚಿತ್ರಬಿಡುಗಡೆಗೆ ಸಿದ್ಧವಾಗಿದೆ.

Advertisement

ಕಾದಂಬರಿಗಾರ್ತಿ ಭಾಗ್ಯ ಕೃಷ್ಣಮೂರ್ತಿ ಮಾತನಾಡಿ, ನಾನೊಬ್ಬ ಪತ್ರಕರ್ತೆ. 32 ಕಾದಂಬರಿಗಳನ್ನು ಬರೆದಿದ್ದೇನೆ, ಅದರಲ್ಲಿ ಅಭಿನೇತ್ರಿ ಸಿನಿಮಾ ಆಗಿದೆ. 2004ರಲ್ಲಿ ನಾನು ಬರೆದಿದ್ದ ಈ ಕಾದಂಬರಿ ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಕೆಲವು ಘಟನೆಗಳು ನೈಜವಾಗಿಯೇ ಇರುವಂತೆ ಕಂಡಿರುವುದು ಆಶ್ಚರ್ಯ ಮೂಡಿಸಿದೆ ಎಂದರು.

ಶ್ಯಾನುಭೋಗರ ಮಗಳು ಶರಾವತಿಯ ಪಾತ್ರ ನಿರ್ವಹಿಸಿರುವ ರಾಗಿಣಿ ಪ್ರಜ್ವಲ್‌ ಮಾತನಾಡುತ್ತಾ, “ತುಂಬಾ ದಿನಗಳ ಗ್ಯಾಪ್‌ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೂಲತಃ ಕ್ಲಾಸಿಕಲ್‌ ಡ್ಯಾನ್ಸರ್‌. ಈ ಚಿತ್ರದಲ್ಲಿ ಡಬ್ಬಿಂಗ್‌ ಕೂಡ ಮಾಡಿದ್ದೇನೆ. ದು:ಖದ ಸನ್ನಿವೇಶಗಳಲ್ಲಿ ಗ್ಲಿಸರಿನ್‌ ಉಪಯೋಗಿಸದೆ ಅಭಿನಯಿಸಿದ್ದೇನೆ. ಇಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.

ನಿರ್ದೇಶಕ ಕೋಡ್ಲು ರಾಮಕೃಷ್ಣ ಮಾತನಾಡಿ, ಈ ಸಿನಿಮಾ ಪ್ರಾರಂಭವಾಗಿದ್ದೇ ಆಕಸ್ಮಿಕ. ಭಾಗ್ಯ ಅವರು ನನಗೆ 35 ವರ್ಷಗಳ ಸ್ನೇಹಿತೆ. ನನ್ನ 32 ಸಿನಿಮಾಗಳಲ್ಲಿ 14 ಕಾದಂಬರಿ ಆಧಾರಿತ ಚಿತ್ರಗಳೇ ಎನ್ನುವುದು ವಿಶೇಷ. 18ನೇ ಶತಮಾನದಲ್ಲಿ ನಡೆಯುವ ಕಥೆಯಿದು ಎಂದರು.

ಸಿ.ಎಂ. ನಾರಾಯಣ್‌ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಜೈಆನಂದ್‌ ಅವರ ಛಾಯಾಗ್ರಹಣವಿದೆ. ಚಿತ್ರದಉಳಿದ ಪಾತ್ರಗಳಲ್ಲಿ ನಿರಂಜನ್‌ ಶೆಟ್ಟಿ, ರಮೇಶ್‌ ಭಟ್, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ, ಶ್ರೀನಿವಾಸಮೂರ್ತಿ, ಟಿಪ್ಪು ಸುಲ್ತಾನ್‌ ಪಾತ್ರದಲ್ಲಿ ನಟ ಕಿಶೋರ್‌ ಅವರು ಅಭಿನಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next