Advertisement

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

01:16 PM May 29, 2022 | Team Udayavani |

ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ರಾಗಿಣಿ ವಿವಾದಗಳಿಗೆ ತೆರೆ ಎಳೆದು ಮತ್ತೆ ತೆರೆ ಮೇಲೆ ಮಿಂಚಲು ವಾಪಾಸ್‌ ಆಗಿದ್ದಾರೆ. ಈ ಹಿಂದೆ “ಕರ್ಮ ರಿಟರ್ನ್ಸ್’ ಚಿತ್ರ ಮಾಡಿದ್ದ ಚಿತ್ರತಂಡ ರಾಗಿಣಿ ಅವರ ನೂತನ ಚಿತ್ರ “ಸಾರಿ’ ನಿರ್ದೇಶಿಸುತ್ತಿದೆ.

Advertisement

ಇತ್ತೀಚೆಗೆ ರಾಗಿಣಿ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಗಣ್ಯರು ರಾಗಿಣಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

“ಚಿತ್ರದ ಕಥೆ ತುಂಬಾ ಇಷ್ಟವಾಯಿತು. ಈ ಚಿತ್ರದ ನಿರ್ದೇಶಕ ಬ್ರಹ್ಮ ಅವರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ಅತ್ಯುತ್ತಮ ತಂತ್ರಜ್ಞ ಅವರು. ನಾನು ಒಂದೇ ತರಹದ ಪಾತ್ರ ಮಾಡಲು ಇಷ್ಟ ಪಡುವುದಿಲ್ಲ. ಬೇರೆ ಬೇರೆ ಪಾತ್ರ ಮಾಡಬೇಕೆಂದು ನನ್ನ ಆಸೆ. ಇದರಲ್ಲೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮ ಹಾರೈಕೆ ಸದಾ ಇರಲಿ’ ಎನ್ನುತ್ತಾರೆ ನಾಯಕಿ ರಾಗಿಣಿ ದ್ವಿವೇದಿ.

“ನಾನು 2000 ನೇ ಇಸವಿಯಿಂದಲ್ಲೂ ಅನಿಮೇಷನ್‌ ಹಾಗೂ ವಿಎಫ್ ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಕೆಲವರಿಗೆ ತರಗತಿ ಕೂಡ ತೆಗೆದುಕೊಳ್ಳುತ್ತೇನೆ. ಹಿಂದೆ ಸಿದ್ದಿ ಸೀರೆ ಎಂಬ ಚಿತ್ರ ನಿರ್ದೇಶಿಸಿದ್ದ ನನಗೆ ಇದು ಎರಡನೇ ಚಿತ್ರ. ಕಥೆಯ ಒಂದೆಳೆ ಇಷ್ಟವಾಯಿತು. ನಾನು ಅದನ್ನು ಮುಂದುವರೆಸಿದೆ. ಇದರಲ್ಲಿ ಮಾಟ-ಮಂತ್ರ, ಬ್ಲ್ಯಾಕ್‌ ಮ್ಯಾಜಿಕ್‌ ಅಂತ ಏನು ಇಲ್ಲ. ಇದೊಂದು ಕ್ರೈಂ ಥ್ರಿಲ್ಲರ್‌. ಸೂಪರ್‌ ಹೀರೋ ಕಾನ್ಸೆಪ್ಟ್ ನ ಚಿತ್ರ ಕೂಡ ಹೌದು’ ಎನ್ನುತ್ತಾರೆ ನಿರ್ದೇಶಕ ಬ್ರಹ್ಮ.

ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಭಾ.ಮ.ಹರೀಶ್ ಆಯ್ಕೆ

Advertisement

ಕೆನಡಾ ನಿವಾಸಿ ನವೀನ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಜೈ ಕೃಪ್ಲಾನಿ ಹಾಗೂ ಜೇನ್‌ ಜಾರ್ಜ್‌ ಸಹ ನಿರ್ಮಾಪಕರು. ಬೆಂಗಳೂರು, ಸಕಲೇಶಪುರದ ಸುತ್ತ ಚಿತ್ರೀಕರಣ ಮಾಡಿದ್ದೇವೆ. ಮುಂದಿನ ಭಾಗದ ಚಿತ್ರೀಕರಣ ಹೈದರಾಬಾದ್‌ ನಲ್ಲಿ ನಡೆಯಲಿದೆ ಎಂಬುದು ಚಿತ್ರ ತಂಡ ನೀಡುವ ಮಾಹಿತಿ.

ಛಾಯಾಗ್ರಾಹಕ ರಾಜೀವ್‌ ಗಣೇಶನ್‌ ಹಾಗೂ ನಟ ಸ್ವರ್ಣ ಚಂದ್ರ ಕೂಡ ಸಾರಿ ಚಿತ್ರದ ಬಗ್ಗೆ ಮಾತನಾಡಿದರು. ನವೀನ್‌ ಕುಮಾರ್‌ ನಿರ್ಮಾಣ, ಬ್ರಹ್ಮ ನಿರ್ದೇಶನ, ರಾಜೀವ್‌ ಗಣೇಶನ್‌ ಛಾಯಾಗ್ರಹಣ, ರಾಜು ಎಮಿಗ್ನೂರ್‌ ಸಂಗೀತ ಈ ಚಿತ್ರಕ್ಕಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next