ಆರಂಭದಲ್ಲಿ ಕನ್ನಡದ ಜೊತೆ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿದ್ದ ನಟಿ ರಾಗಿಣಿ ದ್ವಿವೇದಿ, ಕಳೆದ ನಾಲ್ಕೈದು ವರ್ಷಗಳಿಂದ ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯ ರಾಗಿಣಿ ಕನ್ನಡದಲ್ಲಿ ಅಭಿನಯಿಸುತ್ತಿರುವ 2-3 ಚಿತ್ರಗಳು ಅನೌನ್ಸ್ ಆಗಿದ್ದರೂ, ಆ ಚಿತ್ರಗಳು ಅಷ್ಟಕ್ಕೆ ನಿಂತಿವೆ. ಇದರ ನಡುವೆಯೇ ರಾಗಿಣಿ ಸದ್ದಿಲ್ಲದೆ ತಮಿಳು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಹೌದು, ರಾಗಿಣಿ ತಮಿಳಿನ “ಒನ್ ಟು ಒನ್’ ಎಂಬ ಹೊಸಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದೇ ಸಂಕ್ರಾಂತಿ ಹಬ್ಬದ ದಿನದಂದು ಈ ಹೊಸಚಿತ್ರದ ಮುಹೂರ್ತ ಕೂಡ ನೆರವೇರಿದೆ. ಇನ್ನು ಔಟ್ ಆ್ಯಂಡ್ ಔಟ್ ಫ್ಯಾಮಿಲಿ ಡ್ರಾಮಾ ಜೊತೆಗೆ ಸಸ್ಪೆನ್ಸ್ -ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ, ರಾಗಿಣಿ ದ್ವಿವೇದಿ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತದೆ.
ಇದನ್ನೂ ಓದಿ:ಥಿಯೇಟರ್‌ನಲ್ಲಿ ಜಲ್ಲಿಕಟ್ಟು ಆಟ: ಗೋ ಸಂರಕ್ಷಣೆ ರಾಜಕೀಯದ ಸುತ್ತ ಒಂದು ಚಿತ್ರ
ಮೂಲಗಳ ಪ್ರಕಾರ, ತಿರುಜ್ಞಾನಂ ನಿರ್ದೇಶನದಲ್ಲಿ ಮಾಡಿಬರುತ್ತಿರುವ “ಒನ್ ಟು ಒನ್’ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಿದ್ದು, ಇದೇ ವರ್ಷದ ಮಧ್ಯ ಭಾಗಕ್ಕೆ ರಾಗಿಣಿ ಹೊಸ ತಮಿಳು ಚಿತ್ರ ತೆರೆಗೆ ಬರುವ ಯೋಚನೆಯಲ್ಲಿದೆ ಎನ್ನಲಾಗುತ್ತಿದೆ.