ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಗಂಪದಡ್ಡ ಎಂಬಲ್ಲಿ ರಘುರಾಮ ಶೆಟ್ಟಿ (58) ಶುಕ್ರವಾರ (ಡಿ.2 ರಂದು) ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Advertisement
ಶುಕ್ರವಾರ ರಾತ್ರಿ 9:15 ರ ವೇಳೆಗೆ ಮನೆಯಲ್ಲಿ ರಾತ್ರಿ ಊಟ ಮುಗಿಸಿ ನೀರು ಕುಡಿಯಲು ಅಡುಗೆ ಕೋಣೆಗೆ ಹೋದ ಸಮಯಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡ ರಘುರಾಮ ಶೆಟ್ಟಿ ಕೂಡಲೇ ಆಸ್ಪತ್ರೆಗೆ ದಾಖಲಾಯಿಸಲಾಗಿತ್ತು. ಆದರೆ ವೈದ್ಯರು ಪರೀಕ್ಷಿಸಿ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮೃತರು ಕೃಷಿಕರಾಗಿದ್ದು, ಅನೇಕ ಧಾರವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿಸಿದ್ದರು. ಪತ್ನಿ ಹಾಗೂ ಪುತ್ರನನ್ನು ಮೃತರು ಆಗಲಿದ್ದಾರೆ.