Advertisement
ಆಗಷ್ಟೇ ತಮ್ಮ ಹೊಸ ಚಿತ್ರ “ರಾಜಿ’ ಮುಹೂರ್ತ ಮುಗಿಸಿಕೊಂಡು ಕುಳಿತಿದ್ದ ರಾಘಣ್ಣನಿಗೆ ಸಹೋದರ ಪುನೀತ್ ನೆನಪು ಕಾಡುತ್ತಿತ್ತು. ದುಃಖ, ನೋವು ಏನೇ ಇದ್ದರೂ ಜೀವನ ಮುಂದೆ ಹೋಗಲೇಬೇಕು ಎಂಬ ಸತ್ಯ ಕೂಡಾ ಅವರಿಗೆ ಗೊತ್ತಿದೆ. “ನಮ್ಮವರನ್ನು ಕಳೆದುಕೊಂಡಾಗ ಜೀವನ ತುಂಬಾ ಕಷ್ಟ ಆಗುತ್ತದೆ ನಿಜ. ಆದರೆ, ನಮಗೆ ನಾವೇ ಧೈರ್ಯ ಕೊಟ್ಟುಕೊಂಡು ಮುಂದೆ ಹೋಗಬೇಕು. ದೇವರು ಯಾರೋ ಒಬ್ಬರನ್ನು ಕರೆದುಕೊಂಡು ಇನ್ನೊಬ್ಬರಿಗೆ ಶಕ್ತಿಕೊಡುತ್ತಾನೆ’ ಎನ್ನುವುದು ರಾಘಣ್ಣ ಮಾತು.
Related Articles
Advertisement
ಪವರ್ ಜೊತೆ 20 ವರ್ಷ ಇದ್ದವರು, ಅವರಿಗೆ ಪವರ್ ಇರಲ್ವಾ? ಹೀಗೆ ಹೇಳುವ ಮೂಲಕ ಪಿಆರ್‌ಕೆಯನ್ನು ಅಶ್ವಿನಿ ನೋಡಿಕೊಳ್ಳುತ್ತಾರೆ ಎನ್ನುವುದು ರಾಘಣ್ಣ ಮಾತು.
“ಪಿಆರ್‌ಕೆ ಅಪ್ಪುವಿನ ಕನಸು. ಹೊಸ ಪ್ರತಿಭೆಗಳಿಗೆ ಜಾಗ ಕೊಡಬೇಕು ಎಂಬ ಆಸೆಯಿಂದ ಹುಟ್ಟಿಕೊಂಡಿದ್ದು. ಅಭಿನಯ ತಂದೆಯಿಂದ ಬಂದರೆ, ನಿರ್ಮಾಣದ ಗುಣ ಅಮ್ಮನಿಂದ ಬಂತು. ಅದೇ ಕಾರಣಕ್ಕೆ ಅಮ್ಮನ ಹೆಸರಿನೊಂದಿಗೆ ನಿರ್ಮಾಣ ಆರಂಭಿಸಿದ್ದ ಅಪ್ಪು. ಎರಡು ವರ್ಷದಿಂದ, ಹೆಂಡತಿಯನ್ನು ಜತೆಗೆ ಸೇರಿಸಿ ಕೊಂಡಿದ್ದ. ನಾನಿಲ್ಲದಿದ್ದರೆ ನೋಡಿಕೊಳ್ಳಬೇಕಾಗುತ್ತೆ ಅಂತ ತಯಾರು ಮಾಡಿದ್ದ. ಅವರು ಇನ್ನೂ ಚೆನ್ನಾಗಿ ನಡೆಸುತ್ತಾರೆ. ನಾವು ಜೊತೆಗಿರುತ್ತೇವೆ’ ಎನ್ನುವ ಮೂಲಕ ಪಿಆರ್‌ಕೆ ಬಗ್ಗೆ ಹೇಳುತ್ತಾರೆ.
ಇದನ್ನೂ ಓದಿ:21 ವರ್ಷದ ಬಳಿಕ ಮಿಸ್ ಯುನಿವರ್ಸ್ ಗೆದ್ದ ಭಾರತದ ಚೆಲುವೆ; ಕಿರೀಟ ಗೆದ್ದ ಹರ್ನಾಜ್ ಸಂಧು
ಇನ್ನು “ಗಂಧದ ಗುಡಿ’ ಟೀಸರ್ ಬಗ್ಗೆ ಮಾತನಾಡುವ ರಾಘಣ್ಣ, “ಪುನೀತ್‌ಗೆ ಅದರ ಬಗ್ಗೆ ದೊಡ್ಡ ಕನಸಿತ್ತು. ಸ್ಟಾರ್ ಗಿರಿ ಬಿಟ್ಟು, ಒಬ್ಬ ಸಾಮಾನ್ಯ ಮನುಷ್ಯನಾಗಿ ಒಂದೊಳ್ಳೆಯ ಸಂದೇಶ ಕೊಡಬೇಕೆಂಬ ಉದ್ದೇಶದಿಂದ ಬಣ್ಣ ಹಚ್ಚದೆಯೇ ಅದರಲ್ಲಿ ಕಾಣಿಸಿಕೊಂಡಿದ್ದ. ಅದೇ ಕಾರಣದಿಂದ ಅವನದೇ ಆದ ಒಂದು ತಂಡ ಕಟ್ಟಿಕೊಂಡು ಕಾಡಿಗೆ ಹೋಗುತ್ತಿದ್ದ. ಎಷ್ಟೋ ಜನ ಬುಡಕಟ್ಟು ಜನಾಂಗದವರನ್ನು ಭೇಟಿ ಮಾಡುತ್ತಿದ್ದ. ಅವರಿಗೆ ಶಿಕ್ಷಣ ಕೊಡಿಸಬೇಕೆಂಬ ಕನಸು ಕೂಡಾ ಅವನಿಗಿತ್ತು. ಪುನೀತ್ ಕನಸು ಈಡೇರಿಸಲು ನಾವು ಶ್ರಮಿಸುತ್ತೇವೆ’ ಎಂದರು.