Advertisement
* “ಚಿಲಂ’ ನಿಮ್ಮ ಮೂರನೇ ಚಿತ್ರ, ತಯಾರಿ ಹೇಗಿದೆ?ಯಾವ ಚಿತ್ರ ಮಾಡಿದರೂ, ಅದು ನನ್ನ ಮೊದಲ ಚಿತ್ರ ಅಂದುಕೊಳ್ಳುತ್ತೇನೆ. ಹಿಂದಿನ ಎರಡು ಚಿತ್ರಗಳಲ್ಲಿ ಸಣ್ಣ ಇದ್ದೆ. ಈ ಚಿತ್ರದ ಕಥೆ ಡಿಫರೆಂಟ್, ಪಾತ್ರವೂ ಸಖತ್ ಆಗಿದೆ. ಹಾಗಾಗಿ ನಾನು ಬಾಡಿ ಬಿಲ್ಡ್ ಮಾಡುತ್ತಿದ್ದೇನೆ. ದಪ್ಪನೆ ಗಡ್ಡ, ಕೂದಲು ಬಿಡುತ್ತಿದ್ದೇನೆ. ಶೂಟಿಂಗ್ ಶುರುವಾಗುವವರೆಗೂ ವಕೌìಟ್ ಮಾಡುತ್ತಿರುತ್ತೇನೆ. ಪಕ್ಕಾ ತಯಾರಿಯೊಂದಿಗೇ ಸೆಟ್‌ಗೆ ಹೋಗುತ್ತೇನೆ.
“ಚಿಲಂ’ನಲ್ಲಿ ಡ್ರಗ್ ಡೀಲರ್ ಪಾತ್ರವಿದೆ. ಅದೊಂದು ರೀತಿಯ ರಗಡ್ ಪಾತ್ರ. ಮೊದಲ ಸಲ ಗಾಂಜಾ ಸ್ಮಗ್ಲರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೆಚೂÂರ್x ಆಗಿರುವ ಖದರ್ ಲುಕ್ ಇರಲಿದೆ. ಆಟಿಟ್ಯೂಡ್ ಇರುವಂತಹ ವಿಭಿನ್ನ ಪಾತ್ರ. ಒಟ್ಟಾರೆ ಮನೋರಂಜನೆ ಚಿತ್ರದ ಉದ್ದೇಶ. * ರಾಘವೇಂದ್ರ ರಾಜಕುಮಾರ್ ವಿಲನ್ ಅಂತೆ?
ಹೌದು, ಮೊದಲಿಗೆ ನಾನು ರಾಘಣ್ಣನ ಜೊತೆ ನಟಿಸುತ್ತಿರೋದು ಹೆಮ್ಮೆ ಎನಿಸುತ್ತಿದೆ. ರಾಘಣ್ಣ ಹದಿಮೂರು ವರ್ಷಗಳ ಬಳಿಕ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿರುವುದು ಇನ್ನಷ್ಟು ತೂಕ ಹೆಚ್ಚಿಸಿದೆ.
Related Articles
ಪಕ್ಕಾ ಸ್ವಮೇಕ್ ಕಥೆ. ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಳ್ಳೇ ಸ್ಕೋಪ್ ಇರುವಂತಹ ಪಾತ್ರ ಸಿಕ್ಕಿದೆ. ಕಥೆಯಲ್ಲಿ ಸಾಕಷ್ಟು ತಿರುವುಗಳಿವೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಇಲ್ಲಿ ಎಲ್ಲವೂ ಹೊಸದಾಗಿದೆ. “ಸಾಹೇಬ’, “ಬೃಹಸ್ಪತಿ’ ಚಿತ್ರಗಳಲ್ಲಿ ನನ್ನ ಪಾತ್ರ ಸಾಫ್ಟ್ ಅಂತ ಎಲ್ಲರೂ ಹೇಳುತ್ತಿದ್ದರು. “ಚಿಲಂ’ನಲ್ಲಿ ಹೈಲೆಟ್ ಅಂದರೆ, ರಗಡ್ ಪಾತ್ರ ಮಾಡುತ್ತಿರೋದೇ ವಿಶೇಷ.
Advertisement
ಭರ್ಜರಿ ಫೈಟ್ಸ್, ಚೇಸಿಂಗ್ ಎಲ್ಲವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ನಾನಾ ಪಾಟೇಕರ್, ದೇವರಾಜ್ ಇಲ್ಲಿ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡರೆ, ರಾಘಣ್ಣ ವಿಲನ್, ಸುಮನ್ ರಂಗನಾಥ್ ಕೂಡ ಸ್ಪೆಷಲ್ ರೋಲ್ ಮಾಡುತ್ತಿದ್ದಾರೆ. ಸರಿತಾ ಅವರು ಅಮ್ಮನ ಪಾತ್ರ ಮಾಡುತ್ತಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಇದ್ದಾರೆ. ಇದೊಂದು ದೊಡ್ಡ ಬಜೆಟ್ ಚಿತ್ರ ಎಂಬುದು ಹೈಲೆಟ್.
* ಚಿತ್ರತಂಡ ಹೇಗನ್ನಿಸುತ್ತೆ?ಒಳ್ಳೆಯ ತಂಡ ಇಲ್ಲಿದೆ. ನಿರ್ದೇಶಕಿ ಚಂದ್ರಕಲಾ ಕಥೆ ಹೇಳಿದಾಗ, ಎಲ್ಲೂ ಡೌಟ್ ಇರಲಿಲ್ಲ. ಅಲ್ಲಿ ಮೊದಲು ಅವರು ಗೆದ್ದರು. ಚರ್ಚೆ ಮಾಡಬೇಕು ಅಂದಾಗೆಲ್ಲ ಬರುತ್ತಿದ್ದರು. ಏನಾದರೂ ಬದಲಾವಣೆ ಬಯಸಿದಾಗ, ಒಪ್ಪಿದರು. ನನಗೆ ಎರಡು ತಿಂಗಳು ಮುಂಚೆಯೇ, ಸ್ಕ್ರಿಪ್ಟ್ ಕೊಟ್ಟಿದ್ದರು. ಮೊದಲೇ ಪ್ಲಾನಿಂಗ್ ಮಾಡಿಕೊಂಡಿದ್ದರಿಂದ ಯಾವುದೇ ಸಮಸ್ಯೆ ಇಲ್ಲದಂತೆ ಕೆಲಸ ಮಾಡುತ್ತಿದೆ. * ಅಪ್ಪ ಕಥೆ ಕೇಳಿದ್ರಾ?
ಇಲ್ಲ. ನಾನೇ ಕೇಳಿ ಆಯ್ಕೆ ಮಾಡಿಕೊಂಡೆ. ನಿನಗೆ ಇಷ್ಟದ ಪಾತ್ರವನ್ನು ಮಾಡು ಅಂತ ಅಪ್ಪ ಹೇಳಿದ್ದಾರೆ. ಅದರಂತೆ ಪಾತ್ರ ಇಷ್ಟವಾಯ್ತು. ಒಪ್ಪಿಕೊಂಡೆ. * ಸಹೋದರ ವಿಕ್ಕಿ ಏನ್ಮಾಡ್ತಾ ಇದ್ದಾರೆ?
ಸದ್ಯಕ್ಕೆ ಸಿನಿಮಾಗೆ ರೆಡಿಯಾಗುತ್ತಿದ್ದಾನೆ. ಒಳ್ಳೇ ಪ್ರಾಜೆಕ್ಟ್ ಬಂದರೆ, ಅವನೂ ಹೀರೋ ಆಗ್ತಾನೆ.