Advertisement

ರಫೇಲ್‌ ದಾಖಲೆ ಕಳವು ಯತ್ನ

11:23 PM May 22, 2019 | Team Udayavani |

ಪ್ಯಾರಿಸ್‌: ಫ್ರಾನ್ಸ್‌ನಲ್ಲಿರುವ ಭಾರತೀಯ ವಾಯುಪಡೆಯ ರಫೇಲ್‌ ಪ್ರಾಜೆಕ್ಟ್ ನಿರ್ವಹಣೆ ತಂಡದ ಕಚೇರಿಯಲ್ಲಿ ದಾಖಲೆ ಕಳ್ಳತನ ಯತ್ನ ರವಿವಾರ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಆದರೆ ಯಾವುದೇ ಹಾರ್ಡ್‌ಡಿಸ್ಕ್ ಅಥವಾ ದಾಖಲೆ ಕಳ್ಳತನವಾಗಿಲ್ಲ ಎಂದು ವಾಯುಪಡೆ ವಿವರಿಸಿದೆ. ಇದು ಬೇಹುಗಾರಿಕೆಯ ಯತ್ನವಾಗಿತ್ತು. ಇದರ ಉದ್ದೇಶ ಮತ್ತಿತರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿವೆ ಎಂದು ಮೂಲಗಳು ತಿಳಿಸಿವೆ. ರಫೇಲ್‌ ಪ್ರಾಜೆಕ್ಟ್ ತಂಡದಲ್ಲಿ ಗ್ರೂಪ್‌ ಕ್ಯಾಪ್ಟನ್‌ ಶ್ರೇಣಿಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಇವರು ಒಪ್ಪಂದಕ್ಕೆ ಸಂಬಂಧಿಸಿದ ವಿಚಾರಗಳ ಮೇಲ್ವಿಚಾರಣೆ ನಡೆಸುತ್ತಾರೆ.

Advertisement

ಉತ್ಪಾದನೆ ಕಾಲಾವಧಿ ಮತ್ತು ಭಾರತೀಯ ಸಿಬಂದಿಯ ತರಬೇತಿ ಹಾಗೂ ಇತರ ವಿಚಾರಗಳ ನಿಗಾ ವಹಿಸುವುದು ಇವರ ಜವಾಬ್ದಾರಿ ಯಾಗಿರುತ್ತದೆ. ಸದ್ಯ ಈ ಕಚೇರಿಯು ಪ್ಯಾರಿಸ್‌ನ ಸೇಂಟ್‌ ಕೌÉಡ್‌ನ‌ಲ್ಲಿದ್ದು, ಇದು ರಫೇಲ್‌ ಉತ್ಪಾದನೆ ಮಾಡುತ್ತಿರುವ ಕಂಪೆನಿ ಡಸಾಲ್ಟ್ನ ಕಚೇರಿಗೆ ಸಮೀಪದಲ್ಲಿದೆ. ಸದ್ಯ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈಗಾಗಲೇ ರಕ್ಷಣಾ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next