Advertisement

ದೀರ್ಘಕಾಲದ ಕೋರ್ಟ್ ಎದುರಾಳಿ ವಿದಾಯ ಹೇಳುತ್ತಿದ್ದಂತೆ ಕಣ್ಣೀರಿಟ್ಟ ರಾಫೆಲ್ ನಡಾಲ್

05:10 PM Sep 24, 2022 | Team Udayavani |

ಲಂಡನ್: ಟೆನ್ನಿಸ್ ಲೋಕದ ದಂತಕಥೆ ರೋಜರ್‌ ಫೆಡರರ್ ಶುಕ್ರವಾರ ತಮ್ಮ ಅಂತಿಮ ಪಂದ್ಯವಾಡಿದರು. ಕೆಲ ದಿನಗಳ ಹಿಂದಷ್ಟೇ ವಿದಾಯದ ಬಗ್ಗೆ ಘೋಷಣೆ ಮಾಡಿದ್ದ ಫೆಡರರ್, ಶುಕ್ರವಾರ ಲಂಡನ್ ನಲ್ಲಿ ನಡೆದ ಲೇವರ್ ಕಪ್ ನಲ್ಲಿ ಕೊನೆಯ ಪಂದ್ಯವಾಡಿದರು.

Advertisement

ವಿಶೇಷವೆಂದರೆ ದೀರ್ಘಕಾಲದ ಕೋರ್ಟ್ ಎದುರಾಳಿ ರಾಫೆಲ್ ನಡಾಲ್ ಜೊತೆ ಜೋಡಿಯಾಗಿ ಫೆಡರರ್ ಆಡಿದ್ದು, ಯುರೋಪ್ ತಂಡದ ಪರವಾಗಿ ಆಡಿದ ಫೆಡಲ್, ವಿಶ್ವ ತಂಡದ ಎದುರು ಸೋಲನುಭವಿಸಿತು.

ಕೊನೆಯ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ರೋಜರ್ ಭಾರವಾದ ಹೃದಯದಿಂದಲೇ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಇದೇ ವೇಳೆ ರೋಜರ್ ಫೆಡರರ್ ಭಾವುಕರಾಗುತ್ತಿದ್ದಂತೆ ರಾಫೆಲ್ ನಡಾಲ್ ಕೂಡಾ ಕಣ್ಣೀರು ಹರಿಸಿದರು. ನಡಾಲ್ ಭಾವುಕಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಇದನ್ನೂ ಓದಿ:ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಸಲಾರ್ ನಟಿ ಶ್ರುತಿ ಹಾಸನ್

ಫೆಡರರ್ ವಿದಾಯ ಭಾಷಣ ಕೇಳಿದ ರಾಫ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ಇಬ್ಬರು ದಿಗ್ಗಜರ ಅಳು, ಸ್ನೇಹಕ್ಕೆ ಇಡೀ ಟೆನಿಸ್ ಜಗತ್ತೇ ಸಾಕ್ಷಿಯಾಗಿತ್ತು. ಪಂದ್ಯ ಮುಕ್ತಾಯದ ಬಳಿಕ ರೋಜರ್ ಫೆಡರರ್ ಕೊಂಚ ಭಾವೋದ್ವೇಗಕ್ಕೆ ಒಳಗಾಗಿ ತಮ್ಮ ಟೆನಿಸ್ ವೃತ್ತಿಬದುಕನ್ನು ಸ್ಮರಿಸಿದರು. ರೋಜರ್ ಫೆಡರರ್ ಭಾವುಕರಾಗುತ್ತಿದ್ದಂತೆ 22 ಟೆನಿಸ್ ಗ್ರ್ಯಾನ್ ಸ್ಲಾಂ ಒಡೆಯ ನಡಾಲ್ ಕೂಡಾ ದುಃಖ ತಡೆದುಕೊಳ್ಳದೇ ಕಣ್ಣೀರು ಹಾಕಿದ್ದಾರೆ.

Advertisement

ಯಾವ ಪ್ರತಿಸ್ಪರ್ಧಿಗಳು ಪರಸ್ಪರ ಈ ರೀತಿಯಾಗಿ ಭಾವುಕರಾಗುತ್ತಾರೆ. ಇದುವೇ ಕ್ರೀಡಾ ಸೌಂದರ್ಯ. ಇದು ನನ್ನ ಪಾಲಿಗೆ ಅತ್ಯಂತ ಸುಂದರವಾದ ಕ್ರೀಡಾ ಚಿತ್ರವಾಗಿದೆ. ಗೌರವಿಸುವುದನ್ನು ಬಿಟ್ಟು ಬೇರೆನೂ ಇಲ್ಲ ಎಂದು ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

ರೋಜರ್ ಫೆಡರರ್-ರಾಫೆಲ್ ನಡಾಲ್ ಎದುರು ರೆಸ್ಟ್‌ ಆಫ್‌ ದಿ ವರ್ಲ್ಡ್ ತಂಡದ ಫ್ರಾನ್ಸೆಸ್‌ ಟಿಯಾಫೋ ಮತ್ತು ಜ್ಯಾಕ್‌ ಸಾಕ್‌ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಗೆಲುವು ದಾಖಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next