Advertisement

ಆರ್‌ಪಿಎಫ್ ಸಿಬ್ಬಂದಿಗೆ ಗಲಭೆ ನಿಯಂತ್ರಣ ತರಬೇತಿ

09:18 PM Jul 04, 2022 | Team Udayavani |

ನವದೆಹಲಿ: ಗಲಾಟೆ, ದೊಂಬಿಯಂಥ‌ ಪರಿಸ್ಥಿತಿಗಳಲ್ಲಿ ರೈಲ್ವೆ ನಿಲ್ದಾಣಗಳಿಗೆ ನುಗ್ಗಿ ಧಾಂದಲೆ ನಡೆಸುವ ಉದ್ರಿಕ್ತರನ್ನು ನಿಯಂತ್ರಿಸಲು ರೈಲ್ವೆ ಸುರಕ್ಷಾ ಪಡೆಗೆ (ಆರ್‌ಪಿಎಫ್) ವಿಶೇಷ ತರಬೇತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

Advertisement

ಅದಕ್ಕಾಗಿ, ಮೀರತ್‌ನಲ್ಲಿರುವ ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ (ಆರ್‌ಎಎಫ್) ಹಾಗೂ ಅಕಾಡೆಮಿ ಫಾರ್‌ ಪಬ್ಲಿಕ್‌ ಆರ್ಡರ್‌ (ಆರ್‌ಎಪಿಒ) ಜೊತೆಗೆ ತರಬೇತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಈಗಾಗಲೇ ಆರ್‌ಪಿಎಫ್ ನ 182 ಸಿಬ್ಬಂದಿಯುಳ್ಳ ಮೊದಲ ಬ್ಯಾಚ್‌ಗೆ ತರಬೇತಿ ಆರಂಭಿಸಲಾಗಿದೆ.ಇತ್ತೀಚೆಗೆ, ಕೇಂದ್ರ ಸರ್ಕಾರದ ಅಗ್ನಿಪಥ್‌ ಮಾದರಿಯ ಸೇನಾ ನೇಮಕಾತಿ ಪ್ರಕಟಣೆಯನ್ನು ವಿರೋಧಿಸಿ ಉತ್ತರ ಭಾರತದ ಹಲವಾರು ಕಡೆ ಗಲಭೆ, ಪ್ರತಿಭಟನೆಗಳು ಜರುಗಿದ್ದವು. ಆ ವೇಳೆ ಉದ್ರಿಕ್ತರ ಕಿಚ್ಚಿಗೆ ಹಲವಾರು ರೈಲ್ವೆ ನಿಲ್ದಾಣಗಳು ಹಾನಿಗೀಡಾಗಿದ್ದವು. ರೈಲ್ವೆ ಇಲಾಖೆಗೆ ಇದರಿಂದ 1 ಸಾವಿರ ಕೋಟಿ ರೂ. ನಷ್ಟವಾಗಿತ್ತು.

ಹಾಗಾಗಿ, ಭವಿಷ್ಯದಲ್ಲಿ ಉದ್ರಿಕ್ತರನ್ನು ನಿಯಂತ್ರಿಸಲು ಆರ್‌ಪಿಎಫ್ ಸಿಬ್ಬಂದಿಗೆ ಸೂಕ್ತ ತರಬೇತಿ ಅಗತ್ಯವೆಂಬುದನ್ನು ಅರಿತು ಅವರಿಗೆ ತರಬೇತಿ ನೀಡಲು ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next