Advertisement

ರೇಡಿಯೋ ಆ್ಯಕ್ಟಿವ್‌ ಸಾಧನ ಪತ್ತೆಯ ಸಿನಿಮಾ

06:00 AM Aug 10, 2018 | Team Udayavani |

ಹೊಸದಿಲ್ಲಿ: 1965ರಲ್ಲಿ ಚೀನಾದ ಅಣ್ವಸ್ತ್ರಗಳ ಮೇಲೆ ಕಣ್ಗಾವಲಿಡುವುದಕ್ಕಾಗಿ ಭಾರತದ ನಂದಾ ದೇವಿ ಪರ್ವತದ ಮೇಲೆ ಅಮೆರಿಕದ ಸಿಐಎ ಸ್ಥಾಪಿಸಿದ್ದ ಪ್ಲುಟೋನಿಯಂ ರಾಡಾರ್‌ ನಾಪತ್ತೆ ಪ್ರಕರಣ ಇದೀಗ ಹಾಲಿವುಡ್‌ ಸಿನಿಮಾಗೆ ವಸ್ತುವಾಗಿದೆ. 1964ರಲ್ಲಿ ಮೊದಲ ಬಾರಿಗೆ ಚೀನಾ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಆಗ ಚೀನಾದ ಅಣ್ವಸ್ತ್ರ ಸಾಮರ್ಥ್ಯದ ಮೇಲೆ ನಿಗಾ ಇಡಲು ಅಮೆರಿಕ ಬಯಸಿ, ಭಾರತದ ಮೂಲಕ ಇದನ್ನು ಸಾಧಿಸಲು ನಿರ್ಧರಿಸಿತ್ತು. ಭಾರತ ಸರ್ಕಾರವೂ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿತ್ತು. ರಾಡಾರ್‌ಗಾಗಿ ಪ್ಲುಟೋನಿಯಂ ಸಾಧನವನ್ನು 1965ರ ಜೂನ್‌ನಲ್ಲಿ ಭಾರತ-ಚೀನಾ ಗಡಿಯಲ್ಲಿರುವ ನಂದಾ ದೇವಿ ಪರ್ವತಕ್ಕೆ ತೆಗೆದುಕೊಂಡು ಹೋಗಿದ್ದಾಗ, ಹವಾಮಾನ ವೈಪರೀತ್ಯದಿಂದಾಗಿ ಸಾಧನವನ್ನು ಅಲ್ಲೇ ಬಿಡಲಾಗಿತ್ತು.

Advertisement

ಆದರೆ ನಂತರ ಈ ಸಾಧನ ಹಿಮವೃಷ್ಟಿಯಿಂದಾಗಿ ನಾಪತ್ತೆಯಾಗಿದೆ. ಎರಡು ಬಾರಿ ಸಾಧನದ ಶೋಧ ನಡೆಸಲಾಯಿತಾದರೂ, ಸುಳಿವು ಸಿಕ್ಕಿಲ್ಲ. ಈ ಹಿಮ ಪರ್ವತದ ನೀರು ಕರಗಿ ಗಂಗೆಯನ್ನು ಸೇರುತ್ತದೆ. ಒಂದು ವೇಳೆ ಸಾಧನದಿಂದ ವಿಕಿರಣ ಸೋರಿಕೆ ಯಾದರೆ ನೀರು ಕಲುಷಿತವಾಗುತ್ತದೆ. ಅಷ್ಟೇ ಅಲ್ಲ, ಜಲಚರಗಳಿಗೆ ವ್ಯಾಪಕ ಹಾನಿ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಾಧನದ ಆಯುಷ್ಯ 100 ವರ್ಷಗಳವರೆಗಿದ್ದು, ಈಗಲೂ ಇದು ಹಾನಿ ಮಾಡಬಹುದಾದ ಸಾಧ್ಯತೆಯಿದೆ.

ಈ ರೋಚಕ ಕಥೆ ಈಗ ಹಾಲಿವುಡ್‌ ಚಿತ್ರಕಥೆಯಾಗಿದ್ದು, ಗ್ರೆಗ್‌ ಮೆಕ್‌ಲೀನ್‌ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. 2020ರ ವೇಳೆಗೆ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next