“ಪ್ರಚಂಡ ಕುಳ್ಳ’, “ಜೀವನ ಚಕ್ರ’, “ಸತ್ಯ ಶಿವಂ ಸುಂದರಂ’ ಹೀಗೆ 80ರ ದಶಕದ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡು ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಪಂಚಭಾಷಾ ನಟಿ ರಾಧಿಕಾ ಶರತ್‌ಕುಮಾರ್ ಈಗ ಕನ್ನಡ ಕಿರುತೆರೆಯ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ಇದೇ ಸೋಮವಾರದಿಂದ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಚಂದ್ರಕುಮಾರಿ’ ಧಾರಾವಾಹಿಯಲ್ಲಿ ರಾಧಿಕಾ ಶರತ್ ಕುಮಾರ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಶತಮಾನಗಳ ಹಿಂದಿನ ಕಥಾನಕ ಹೊಂದಿರುವ ಈ ಧಾರಾವಾಹಿಯಲ್ಲಿ ರಾಧಿಕಾ ಶರತ್‌ಕುಮಾರ್ ಅವರೊಂದಿಗೆ ಅರುಣ್ ಸಾಗರ್, ಶೋಭಾ ನಾಯ್ಡು ಮೊದಲಾದ ಖ್ಯಾತ ಕಲಾವಿದರು ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದ ರಡಾನ್, ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ.
“ಚಂದ್ರಕುಮಾರಿ’ ಒಂದು ಪಕ್ಕಾ ಫ್ಯಾಂಟಸಿ ಧಾರಾವಾಹಿಯಾಗಿದ್ದು ತುಂಬಾ ಕಲರ್ ಫುಲ್ ಆಗಿ ಚಿತ್ರೀಕರಿಸಲಾಗಿದೆ. ತಾಯಿ ಹಾಗೂ ಮಗಳ ನಡುವಿನ ಶತಮಾನಗಳಹಿಂ ದಿನ ಸಂಘರ್ಷದ ಕಥಾಹಂದರ ಹೊಂದಿದೆ. ವೀಕ್ಷಕರ ಅಭಿರುಚಿಗೆ ತಕ್ಕಂತೆ, ಹೊಸ ಕಾಲದ ಯುವ ವೀಕ್ಷಕರ ಅಭಿರುಚಿಗೆ ತಕ್ಕಂತೆ “ಚಂದ್ರಕುಮಾರಿ’ ಕಥೆ ಹೆಣೆಯಲಾಗಿದೆ. ಗುಣಮಟ್ಟದಲ್ಲೂ ಅದ್ಧೂರಿತನ ಎದ್ದು ಕಾಣುತ್ತದೆ. ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ, ಗುಣಮಟ್ಟದ ಚಿತ್ರೀಕರಣ, ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವ ಗ್ರಾμಕ್ಸ್‌ಗಳು ನೋಡುಗರಿಗೆ ಹೊಸ ಅನು ಭವ ನೀಡಲಿದೆ ಎಂಬ ವಿಶ್ವಾಸ ವಾಹಿನಿಗಿದೆ. ಅಂದಹಾಗೆ, “ಚಂದ್ರಕುಮಾರಿ’ ಜ.7 ರಿಂದ ಧಾರಾವಾಹಿ ಪ್ರಾರಂಭವಾಗಿದ್ದು, ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.