Advertisement

ರಾಧಿಕಾ ಮಿಸ್ಸಿಂಗ್‌

11:27 AM Apr 18, 2017 | |

ಕಳೆದ ವರ್ಷ “ಹೋಮ್‌ ಸ್ಟೇ’ ಎಂಬ ಹಾರರ್‌ ಸಿನಿಮಾವೊಂದು ಬಿಡುಗಡೆಯಾಗಿರೋದು ನಿಮಗೆ ಗೊತ್ತಿರಬಹುದು. ಆ ಸಿನಿಮಾವನ್ನು ನಿರ್ದೇಶಿಸಿದ್ದು ಸಂತೋಷ್‌ ಕೊಡಂಕೇರಿ. ಈಗ ಮತ್ತೆ ಸಂತೋಷ್‌ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ. ಹೊಸ ಚಿತ್ರದ ತಯಾರಿಯಲ್ಲಿರುವ ಅವರಿಗೆ ಮೊದಲ ಹಂತವಾಗಿ ಅಂದುಕೊಂಡ ಟೈಟಲ್‌ ಸಿಕ್ಕ ಖುಷಿ ಇದೆ.

Advertisement

ಅಷ್ಟಕ್ಕೂ ಆ ಟೈಟಲ್‌ ಏನು ಅಂತೀರಾ?. ಅದು “ರಾಧಿಕಾ ಮಿಸ್ಸಿಂಗ್‌’. ಹೌದು, ಸಂತೋಷ್‌ “ರಾಧಿಕಾ ಮಿಸ್ಸಿಂಗ್‌’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಫೈನಲ್‌ ಆಗಿದ್ದು ಕಲಾವಿದರ ಆಯ್ಕೆ ನಡೆಯುತ್ತಿದೆ. ಜೂನ್‌ 15 ರ ನಂತರ ಚಿತ್ರೀಕರಣ ಆರಂಭವಾಗಲಿದೆ. 

ಸಹಜವಾಗಿಯೇ ಟೈಟಲ್‌ ಕೇಳಿದಾಗ ಏನಪ್ಪಾ ಕಥೆ ಎಂಬ ಕುತೂಹಲ ಸಹಜವಾಗಿ ಬರುತ್ತದೆ. ಅದಕ್ಕೆ ನಿರ್ದೇಶಕ ಸಂತೋಷ್‌ ಉತ್ತರಿಸುತ್ತಾರೆ. “ಚಿತ್ರದ ಕಥೆ ಪಕ್ಕಾ ಯೂತ್‌ಫ‌ುಲ್‌ ಆಗಿದೆ. ಇಂದಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಮಾಡಿದ್ದು, ಆ ಕಥೆಗೆ ಈ ಟೈಟಲ್‌ ಬೇಕಿತ್ತು. ಹಾಗಾಗಿ ಅದನ್ನಿಟ್ಟಿದ್ದೇವೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಚಿತ್ರದಲ್ಲಿ ಹೊಸ ಮುಖಗಳಿಗೂ ಅವಕಾಶ ಕೊಡುವ ಉದ್ದೇಶ ಸಂತೋಷ್‌ಗಿದೆ.

ಈ ಹಿಂದೆ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ “ಹೋಮ್‌ ಸ್ಟೇ’ ಮಾಡಿದ್ದ ಸಂತೋಷ್‌ ಈ ಬಾರಿ “ರಾಧಿಕಾ ಮಿಸ್ಸಿಂಗ್‌’ ಚಿತ್ರವನ್ನು ಕನ್ನಡ ಹಾಗೂ ಮಲಯಾಳಂನಲ್ಲಿ ಮಾಡುತ್ತಿದ್ದಾರೆ. ಈ ಹಿಂದೆ ಶರಣ್‌ ಅವರ “ಜೈ ಲಲಿತಾ’ ಸಿನಿಮಾ ನಿರ್ಮಿಸಿದ್ದ ಇಂದಿರಾ ಪ್ರೊಡಕ್ಷನ್ಸ್‌ನಡಿ ಈ ಸಿನಿಮಾ ತಯಾರಾಗುತ್ತಿದೆ. ತಾರಾಗಣ ಸೇರಿದಂತೆ ಇತರ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next