Advertisement

ಕಿರಿಯರ ವಿಶ್ವಕಪ್‌ ತಂಡಕ್ಕೆ ರಾಧಾಕೃಷ್ಣನ್‌ ಆಯ್ಕೆ :2 ಕೈಯಲ್ಲೂ ಬೌಲಿಂಗ್‌ ನಡೆಸುವ ಪ್ರತಿಭೆ!

11:20 PM Dec 27, 2021 | Team Udayavani |

ಸಿಡ್ನಿ : ತಮಿಳುನಾಡು ಮೂಲದ 18 ವರ್ಷದ ಕ್ರಿಕೆಟಿಗ ನಿವೇತನ್‌ ರಾಧಾಕೃಷ್ಣನ್‌ 2022ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಗಾಗಿ ಆಸ್ಟ್ರೇಲಿಯ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಎರಡೂ ಕೈಗಳಲ್ಲಿ ಸ್ಪಿನ್‌ ಬೌಲಿಂಗ್‌ ನಡೆಸುವುದು ಇವರ ವೈಶಿಷ್ಟ್ಯ!

Advertisement

ನಿವೇತನ್‌ ರಾಧಾಕೃಷ್ಣನ್‌ ಇದಕ್ಕೂ ಮುನ್ನ ತಮಿಳುನಾಡು ಕ್ರಿಕೆಟ್‌ ಅಸೋಸಿಯೇಷನ್‌ ಟೂರ್ನಿಗಳಲ್ಲಿ, ತಮಿಳುನಾಡು ಪ್ರೀಮಿಯರ್‌ ಲೀಗ್‌ಗಳಲ್ಲಿ ಆಡಿದ್ದರು. 2021ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ನೆಟ್‌ ಬೌಲರ್‌ ಆಗಿಯೂ ಕಾಣಿಸಿಕೊಂಡಿದ್ದರು. ಟ್ಯಾಸ್ಮೆನಿಯಾದಲ್ಲಿ ಇವರ ವಾಸ.

ಬಲಗೈ ಹಾಗೂ ಎಡಗೈನಲ್ಲಿ ಆಫ್ ಸ್ಪಿನ್‌ ಮಾಡಬಲ್ಲ (ಆ್ಯಂಬಿಡೆಕ್ಸ್‌ ಟ್ರಸ್‌ ಫಿಂಗರ್‌ ಸ್ಪಿನ್ನರ್‌) ಪ್ರಾವೀಣ್ಯತೆ ಹೊಂದಿರುವ ಕಾರಣ ರಾಧಕೃಷ್ಣನ್‌ ಆಸ್ಟ್ರೇಲಿಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ಬ್ಯಾಟ್ಸ್‌ಮನ್‌ಗೆ ತಕ್ಕಂತೆ ಎಡಗೈ ಹಾಗೂ ಬಲಗೈಯಲ್ಲಿ ಬೌಲಿಂಗ್‌ ಮಾಡುವ ಆಯ್ಕೆಯನ್ನು ಅವರು ಹೊಂದಿದ್ದಾರೆ.

ಭಾರತೀಯ ಯುವ ಸ್ಪಿನ್ನರ್‌ ಪ್ರತಿಭೆಯನ್ನು ಗುರುತಿಸಿದ “ಕ್ರಿಕೆಟ್‌ ಆಸ್ಟ್ರೇಲಿಯ’ ಅಂಡರ್‌-19 ವಿಶ್ವಕಪ್‌ ಟೂರ್ನಿಗೆ ತಮ್ಮ ತಂಡದಲ್ಲಿ ಅವಕಾಶ ಕಲ್ಪಿಸಿದೆ.

ವೈಫ‌ಲ್ಯದ ಭಯವಿಲ್ಲ
“ವೈಫ‌ಲ್ಯದ ಬಗ್ಗೆ ನನಗೆ ಭಯ ಇಲ್ಲ. ನನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವವನಲ್ಲ. ಈ ರೀತಿಯ ನಿಯಂತ್ರಣಗಳಿಗೆ ಒಳಗಾದರೆ ಸಾಧನೆ ಮಾಡಲು ಸಾಧ್ಯವೇ?’ ಎಂದು ಅವರ ದಿಟ್ಟ ಪ್ರಶ್ನೆ.

Advertisement

2019ರಲ್ಲಿಯೇ ಆಸ್ಟ್ರೇಲಿಯದ ಅಂಡರ್‌-16 ತಂಡದಲ್ಲಿ ಸ್ಥಾನ ಪಡೆದಿದ್ದ ರಾಧಾಕೃಷ್ಣನ್‌ ಪಾಕಿಸ್ಥಾನ ವಿರುದ್ಧ ಆಡಿದ್ದರು. 5 ಪಂದ್ಯಗಳ ಸರಣಿಯಲ್ಲಿ 172 ರನ್‌ ಹಾಗೂ 8 ವಿಕೆಟ್‌ ಉರುಳಿಸಿ ಎಲ್ಲರ ಗಮನ ಸೆಳೆದಿದ್ದರು.

ಪ್ರಯತ್ನ ಫ‌ಲಿಸಿತು
ಎರಡೂ ಕೈಗಳಿಂದ ಸ್ಪಿನ್‌ ಮಾಡುವ ಕೌಶಲದ ಬಗ್ಗೆ ಪ್ರತಿಕ್ರಿ ಯಿಸಿದ ರಾಧಾಕೃಷ್ಣನ್‌, “ಟಿವಿ ಯಲ್ಲಿ ನೋಡಿದ ಹಾಗೆ, ಚೆನ್ನೈ ಲೀಗ್‌ ಟೂರ್ನಿಗಳಲ್ಲಿ ಕಂಡಂತೆ ಎರಡೂ ಕೈಗಳಿಂದ ಬೌಲ್‌ ಮಾಡುವವರು ಯಾರೂ ನನ್ನ ಗಮನಕ್ಕೆ ಬಂದಿರಲಿಲ್ಲ. ಇಂಥ ಬೌಲರ್‌ಗಳ ಬಗ್ಗೆ ನಾನು ಕೇಳಿಯೂ ಇರಲಿಲ್ಲ. ಹೀಗಾಗಿ ನಾನೇ ಏಕೆ ಈ ರೀತಿ ಬೌಲಿಂಗ್‌ ಮಾಡಬಾರದು ಎಂದು ಅಂದುಕೊಂಡಿದ್ದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದೆ. ಇದು ಯಶಸ್ವಿಯಾಯಿತು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next