ವಾಷಿಂಗ್ಟನ್: ಅಮೇರಿಕದ ವಾಷಿಂಗ್ಟನ್‌ನ ಸಿಯಾಟಲ್ ನಗರವು ಜಾತಿ ಪದ್ಧತಿ ನಿಷೇಧ ಕಾನೂನನ್ನು ಮಂಗಳವಾರ ಜಾರಿಗೆ ತಂದಿದೆ. ಈ ಮೂಲಕ ಇಂತಹಾ ಕಾನೂನನ್ನು ಹೊರತಂದ ಅಮೇರಿಕದ ಮೊದಲ ನಗರ ಎಂಬ ಖ್ಯಾತಿಗೂ ಪಾತ್ರವಾಗಿದೆ.
ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿರುವ ಅಮೇರಿಕದ ಪ್ರಮುಖ ನಗರಗಳಲ್ಲಿ ಸಿಯಾಟಲ್ ಕೂಡಾ ಒಂದು. ದಕ್ಷಿಣ ಏಷ್ಯಾ ಭಾಗದವರೂ ಕೂಡ ಈಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹಾಗಾಗಿ ಭಾರತದ ರೀತಿಯಲ್ಲಿ ಅಲ್ಲಿಯೂ ಜಾತಿಪದ್ದತಿ ಜಾರಿಯಲ್ಲಿತ್ತು.
ಭಾರತೀಯ ಮೂಲದವರೇ ಆಗಿರುವ ಸಿಯಾಟಲ್ ನಗರಸಭೆಯ ಸದಸ್ಯೆ ಕ್ಷಮಾ ಸಾವಂತ್ ಈ ಪದ್ಧತಿಯನ್ನಿ ನಿಷೇಧಿಸುವ ಮಸೂದೆ ಮಂಡಿಸಿದ್ದು. ಅದಕ್ಕೆ 6-1 ಮತಗಳ ಒಪ್ಪಿಗೆ ಸಿಕ್ಕಿತ್ತು.
ಆ ಬಳಿಕ ಮಾತನಾಡಿದ ಕ್ಷಮಾ,ʻ ನಮ್ಮ ಚಳುವಳಿ ಐತಿಹಾಸಿಕ ಗೆಲುವು ಸಾಧಿಸಿಸದೆ. ನಾವು ಬಯಸಿದ್ದು ಈಗ ಅಧಿಕೃತವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ನಮ್ಮ ನಗರದಲ್ಲಿ ಈ ರೀತಿಯ ಕಾನೂನು ಜಾರಿಯಾಗಿದೆ. ಈ ಚಳುವಳೀ ದೇಶದಾದ್ಯಂತ ಪಸರಿಸಬೇಕಾಗಿದೆʼ ಎಂದಿದ್ದಾರೆ.
ಆದರೆ ಇದಕ್ಕೆ ಅಮೇರಿಕದ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ಈ ರೀತಿಯ ಕಾನೂನುಗಳು ಅಮೇರಿಕದಲ್ಲಿ ಜಾರಿಯಲಿದ್ದು ಹೊಸ ಕಾನೂನಿನ ಅಗತ್ಯವಿಲ್ಲ ಎಂದಿದೆ.
ಅಮೇರಿಕದಲ್ಲಿ ಜಾತಿ ಪದ್ಧತಿ ಜಾರಿಯಲ್ಲಿದ್ದು ಈ ವಿರುದ್ಧ ದಲಿತ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಪ್ರತಿಭಟಿಸಿದ್ದವು. ಶಾಲಾ ಕಾಲೇಜುಗಳಲ್ಲೂ ಚಳುವಳಿ ನಡೆದಿದ್ದವು.