Advertisement

Rachita Ram: ಝೈದ್‌ ‘ಕಲ್ಟ್’ ಗೆ ರಚಿತಾ ರಾಮ್‌ ನಾಯಕಿ

10:15 AM Sep 03, 2024 | Team Udayavani |

ಕನ್ನಡದ ಬಹುತೇಕ ಸ್ಟಾರ್‌ಗಳ ಜೊತೆ ನಾಯಕಿ ನಟಿಯಾಗಿ ನಟಿಸಿ, ಚಿತ್ರರಂಗದಲ್ಲಿ ಒಂದು ರೌಂಡ್‌ ಹಾಕಿರುವ ನಟಿ ರಚಿತಾ ರಾಮ್‌ ಈಗ ಮತ್ತೆ ಹೊಸಬರ ಸಿನಿಮಾಗಳತ್ತ ಗಮನ ಹರಿಸಿದಂತಿದೆ.

Advertisement

ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಇರುವ, ಜೊತೆಗೆ ಪತ್ರಿಕಾಗೋಷ್ಠಿಗಳಲ್ಲೂ ಸಿಕ್ಕಾಪಟ್ಟೆ ಗಂಭೀರವಾಗಿರುವ ರಚಿತಾ ರಾಮ್‌ ಈಗ ಹೊಸ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದು ಝೈದ್‌ ಖಾನ್‌ ಜೊತೆ. ಸಚಿವ ಜಮೀರ್‌ ಅಹಮದ್‌ ಪುತ್ರ ಝೈದ್‌ ಖಾನ್‌ ಎರಡನೇ ಚಿತ್ರ “ಕಲ್ಟ್’ಗೆ ರಚಿತಾ ನಾಯಕಿಯಾಗಿದ್ದಾರೆ. ಚಿತ್ರತಂಡ ಹೊಸ ಪೋಸ್ಟರ್‌ ಮೂಲಕ ರಚಿತಾ ಅವರನ್ನು ತಂಡಕ್ಕೆ ಸ್ವಾಗತಿಸಿದೆ.

ಸದ್ಯ ರಚಿತಾ ರಾಮ್‌ ನಾಯಕಿಯಾಗಿರುವ “ಸಂಜು ವೆಡ್ಸ್‌ ಗೀತಾ-2′ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇನ್ನು, ಯುಗಾದಿ ಹಬ್ಬದ ಪ್ರಯುಕ್ತ ಚಿತ್ರತಂಡ ಝೈದ್‌ ಅವರ ಹೊಸ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಒಂದು ಕಡೆ ರಗಡ್‌ ಹಾಗೂ ಮತ್ತೂಂದು ಕಡೆ ರೊಮ್ಯಾಂಟಿಕ್‌ ಲುಕ್‌ ಮೂಲಕ ಪೋಸ್ಟರ್‌ ಗಮನ ಸೆಳೆದಿತ್ತು.. ಮುಖದಲ್ಲೊಂದು ಗಾಯ, ಹುಡುಗಿಯೊಬ್ಬಳ ಕಾಲು ಬೆರಳುಗಳಿಂದ ಸಿಗರೇಟ್‌ ಸೇದುವ ಹೀರೋ.. ಜೊತೆಗೆ “ಬ್ಲಡಿ ಲವ್‌’ ಎಂಬ ಟ್ಯಾಗ್‌ಲೈನ್‌ ಈ ಪೋಸ್ಟರ್‌ನಲ್ಲಿದೆ.

ಅನಿಲ್‌ ಕುಮಾರ್‌ ಈ ಸಿನಿಮಾದ ನಿರ್ದೇಶಕರು. ಈ ಚಿತ್ರ ಲೋಕಿ ಸಿನಿಮಾಸ್‌ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಜೆ.ಎಸ್‌.ವಾಲಿ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್‌ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.