Advertisement

ಮೊದಲ ತೆಲುಗು ಸಿನಿಮಾದ ರಿಲೀಸ್ ಖುಷಿಯಲ್ಲಿ ರಚಿತಾ ರಾಮ್

10:25 AM Jan 15, 2022 | Team Udayavani |

ನಟಿ ರಚಿತಾ ರಾಮ್ ತೆಲುಗಿನ “ಸೂಪರ್ ಮಚ್ಚಿ’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನೀವು ಕೇಳಿರಬಹುದು. ಇದೀಗ ರಚಿತಾ ರಾಮ್ ಅಭಿನಯಿಸಿರುವ ಮೊದಲ ತೆಲುಗು ಚಿತ್ರ ಸಂಕ್ರಾಂತಿ ಹಬ್ಬದ
ಸಂದರ್ಭದಲ್ಲಿ ಬಿಡುಗಡೆಯಾಗಿದೆ.

Advertisement

ಇನ್ನು ಬಿಡುಗಡೆಯಾಗಿರುವ ಔಟ್ ಆ್ಯಂಡ್ ಔಟ್ ಲವ್‌ಸ್ಟೋರಿ ಇರುವ “ಸೂಪರ್ ಮಚ್ಚಿ’ ಚಿತ್ರದಲ್ಲಿ ರಚಿತಾ ರಾಮ್, ನಾಯಕ ಕಲ್ಯಾಣ್ ದೇವ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಲವ್ ಮಾಡು ಎಂದು ನಾಯಕನ ಹಿಂದೆ ದುಂಬಾಲು ಬೀಳುವ, ಮೀನಾಕ್ಷಿ ಎಂಬ ಹೆಸರಿನ ಬಬ್ಲಿ ಹುಡುಗಿ ಪಾತ್ರವನ್ನು ರಚಿತಾ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಹೋಮ್ಲಿ ಹುಡುಗಿ ಗೆಟಪ್‌ನಲ್ಲಿ ರಚಿತಾ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ:ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ: ಸೆಟ್ಟೇರಿದವು ಹಲವು ಚಿತ್ರಗಳು

ಚಿತ್ರದಲ್ಲಿ ರಚಿತಾ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದರೂ, “ಸೂಪರ್ ಮಚ್ಚಿ’ ಅಂದುಕೊಂಡ ರೀತಿಯಲ್ಲಿ ಬಿಡುಗಡೆಯಾಗಲಿಲ್ಲ ಎಂಬ ಮಾತುಗಳು ಟಾಲಿವುಡ್‌ನ‌ಲ್ಲಿ ಕೇಳಿಬರುತ್ತಿದೆ. ಆರಂಭದಲ್ಲಿ “ಸೂಪರ್ ಮಚ್ಚಿ’ ಚಿತ್ರವನ್ನು
ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಯಾವುದೇ ಪ್ರಚಾರವಿಲ್ಲದೆ, ಸುಳಿವೂ ಕೊಡದೆ ಚಿತ್ರ ರಿಲೀಸ್ ಮಾಡಿರುವುದರಿಂದ ಪ್ರೇಕ್ಷಕರನ್ನು ತಲುಪುತ್ತಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ.

ಅದೇನೇ ಇರಲಿ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಜೊತೆಗೆ ತೆಲುಗಿನಲ್ಲೂ ಗುರುತಿಸಿಕೊಂಡಿರುವ ನಟಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್ ಮೊದಲಾದ ನಾಯಕ ನಟಿಯರ ಸಾಲಿನಲ್ಲಿ ಇದೀಗ ರಚಿತಾ ರಾಮ್ ಹೆಸರು ಕೂಡ ಹೊಸದಾಗಿ ಸೇರ್ಪಡೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next