Advertisement

ಕನ್ನಡ ಭಾಷೆಯನ್ನು ನಾವು ಬಿಟ್ಟು ಕೊಡಬಾರದು…ರಚ್ಚು ಮಾತು

10:53 AM Dec 18, 2021 | Team Udayavani |

ಇಲ್ಲಿಯವರೆಗೆ ತನ್ನ ಟೈಟಲ್‌, ಪೋಸ್ಟರ್‌ ಮತ್ತು ಸಾಂಗ್ಸ್‌ ಮೂಲಕ ಸುದ್ದಿ ಮಾಡುತ್ತಿದ್ದ “ಲವ್‌ ಯು ರಚ್ಚು’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮೇಲ್ನೋಟಕ್ಕೆ  ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾದಂತೆ ಕಾಣುವ “ಲವ್‌ ಯು ರಚ್ಚು’ ಚಿತ್ರದ ಟ್ರೇಲರ್‌ನಲ್ಲಿ ನಾಯಕ ಅಜೇಯ್‌ ರಾವ್‌ ಮತ್ತು ನಾಯಕಿ ರಚಿತಾ ರಾಮ್‌ ತೆರೆಮೇಲೆ ನವ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

ತನ್ನ ಅತ್ಯಾಚಾರಕ್ಕೆ ಯತ್ನಿಸಲು ಬರುವ ಡ್ರೈವರ್‌ನನ್ನು ನಾಯಕಿ ಕೊಲೆ ಮಾಡುತ್ತಾಳೆ. ನಾಯಕಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕ ಆಕೆಯನ್ನುಆ ಕೊಲೆಯಿಂದ ಬಚಾವ್‌ ಮಾಡಲು ಪ್ರಯತ್ನಿಸುತ್ತಾನೆ. ಇದರ ನಡುವೆ ಈ ಕೊಲೆಯ ಬಗ್ಗೆ ತಿಳಿದ ಮೂರನೇ ವ್ಯಕ್ತಿಯೊಬ್ಬ ಇಬ್ಬರಿಗೂ ಬ್ಲಾಕ್‌ಮೇಲ್‌ ಮಾಡಲು ಮುಂದಾಗುತ್ತಾನೆ. ಹೀಗೆ ಒಂದು ಕೊಲೆಯ ಸುತ್ತ ನಡೆಯುವ ಸಸ್ಪೆನ್ಸ್‌-ಥ್ರಿಲ್ಲರ್‌ ಅಂಶಗಳ ಸುತ್ತ “ಲವ್‌ ಯು ರಚ್ಚು’ ಚಿತ್ರದ ಕಥೆ ನಡೆಯುತ್ತದೆ ಎಂಬ ಸುಳಿವನ್ನು ಟ್ರೇಲರ್‌ನಲ್ಲಿ ಚಿತ್ರತಂಡ ಬಿಟ್ಟುಕೊಟ್ಟಿದೆ.

ಸದ್ಯ ಬಿಡುಗಡೆಯಾದ “ಲವ್‌ ಯು ರಚ್ಚು’ ಟ್ರೇಲರ್‌ನಲ್ಲಿ ಅಜೇಯ್‌ ರಾವ್‌ ಹಾಗೂ ರಚಿತಾ ರಾಮ್‌ ಆನ್‌ ಸ್ಕ್ರೀನ್‌ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್‌ ಆಗಿದೆ. ಲವ್‌, ರೊಮ್ಯಾನ್ಸ್‌, ಎಮೋಶನ್‌, ಕ್ರೈಂ, ಸಸ್ಪೆನ್ಸ್‌, ಥ್ರಿಲ್ಲರ್‌ ಹೀಗೆ ಎಲ್ಲ ಅಂಶಗಳ ‌ ಸಣ್ಣ ಝಲಕ್‌ ಅನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. “ಲವ್‌ ಯು ರಚ್ಚು’‌ ಸಿನಿಮಾದ ಟೈಟಲ್ಲೇ ಹೇಳುವಂತೆ, ರಚಿತಾ ರಾಮ್‌ ಪಾತ್ರದ ಸುತ್ತಲೂ ಇಡೀ ಸಿನಿಮಾದ ಕಥೆ ಸಾಗುವಂತೆ ಟ್ರೇಲರ್‌ ನಲ್ಲಿಕಾಣುತ್ತಿದೆ.

ಆ್ಯಕ್ಷನ್ ಪ್ರಿನ್ಸ್‌ ಕೈಯಲ್ಲಿ “ರಚ್ಚು’ಟ್ರೇಲರ್‌: ಇನ್ನು “ಹನುಮ ಜಯಂತಿ’ ದಿನದಂದು ನಟ ಧ್ರುವ ಸರ್ಜಾ “ಲವ್‌ ಯು ರಚ್ಚು’ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದ್ದಾರೆ. ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಟ ಧ್ರುವ ಸರ್ಜಾ, “ಟ್ರೇಲರ್‌ ನೋಡಿದರೆ ಇದೊಂದು ಮರ್ಡರ್‌ ಮಿಸ್ಟ್ರಿ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಜನರನ್ನು ಥಿಯೇಟರ್‌ನಲ್ಲಿ ಹಿಡಿದಿಟ್ಟುಕೊಳ್ಳುವಂತ ಎಲ್ಲ ಅಂಶಗಳೂ ಸಿನಿಮಾದಲ್ಲಿರುವಂತೆ ಕಾಣುತ್ತದೆ. ಕನ್ನಡಕ್ಕೆ ಈಗ ಕಂಟೆಂಟ್‌ ಇರುವಂಥ ಸಿನಿಮಾಗಳು ಹೆಚ್ಚಾಗಿ ಬೇಕಾಗಿದೆ. “ಲವ್‌ ಯು ರಚ್ಚು’ ಅಂಥದ್ದೇ ಕಂಟೆಂಟ್‌ ಇರುವಂಥ ಸಿನಿಮಾ. ಇಂಥ ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕಾಗಿದೆ’ ಎಂದರು.

ಇದನ್ನೂ ಓದಿ:ಭಾರತ ಕ್ರಿಕೆಟ್‌ ನಲ್ಲಿ ತೆಂಡುಲ್ಕರ್‌ ಗೆ ಮುಖ್ಯ ಸ್ಥಾನ?: ಗಂಗೂಲಿ ಸುಳಿವು

Advertisement

ನಟಿ ರಚಿತಾ ರಾಮ್‌ ಕೂಡ, ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಇದೊಂದು ಹೊಸ ಥರದ ಸಿನಿಮಾವಾಗಿದ್ದು, ಸಿನಿಮಾದ ಸಬ್ಜೆಕ್ಟ್ ಮತ್ತು ತನ್ನ ಪಾತ್ರ ಎರಡೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅಪ್ಪಟ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ನಮ್ಮ‌ ಭಾಷೆ, ನಮ್ಮ ಜನ, ನಮ್ಮ ತನವನ್ನು ಯಾವತ್ತು ಬಿಟ್ಟುಕೊಡಬಾರದು. ಬೇರೆ ರಾಜ್ಯಗಳಲ್ಲಿ ಅವರವರ ಭಾಷೆಯನ್ನು ಹೇಗೆ ಪ್ರೀತಿಸುತ್ತಾರೋ, ನಾವು ಕೂಡಾ ನಮ್ಮ ಕನ್ನಡವನ್ನು ಪ್ರೀತಿಸಬೇಕು. ಕನ್ನಡ ಭಾಷೆ ಹೆಮ್ಮೆಯನ್ನು ನಾವು ಸಾರಬೇಕು ಮನವಿ ಮಾಡಿದರು.

“ಜಿ ಸಿನಿಮಾಸ್‌’ ಬ್ಯಾನರ್‌ ಅಡಿಯಲ್ಲಿ ಗುರು ದೇಶಪಾಂಡೆ ನಿರ್ಮಾಣ ಮಾಡಿರುವ “ಲವ್‌ ಯು ರಚ್ಚು’ ಚಿತ್ರಕ್ಕೆ ಶಂಕರ್‌ ಎಸ್‌. ರಾಜ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದು, ಕ್ರೇಜಿಮೈಂಡ್ಸ್‌ ಶ್ರೀ ಛಾಯಾಗ್ರಹಣ ಮತ್ತು ಸಂಕಲನವಿದೆ. ಒಟ್ಟಾರೆ “ಲವ್‌ ಯು ರಚ್ಚು’ ಟ್ರೇಲರ್‌ ಸಿನಿಮಾದ ಮೇಲಿನ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುವಂತಿದ್ದು, ಟ್ರೇಲರ್‌ ಬಿಡುಗಡೆಯಾದ ಒಂದೇ ದಿನದ‌ಲ್ಲಿ1.5 ಮಿಲಿಯನ್‌ ಗೂ ಹೆಚ್ಚು ವೀವ್ಸ್‌ ಪಡೆದುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next